ಕ್ರೀಡೆ

ಮುಖ ಮುಚ್ಚಿ 'ಮಾಹಿ' ಟ್ಯಾಟೂ ಬಿಚ್ಚಿಟ್ಟ ಸಾಕ್ಷಿ

ಕಳೆದ ಐಪಿಎಲ್ ಫೈನಲ್ಸ್ ಪಂದ್ಯ ಧೋನಿಯವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನಿಜವಾಗಿಯೂ ನಿರಾಸೆ ಆದರೆ ಸದಾ ಹಸನ್ಮುಖಿ ಸಾಕ್ಷಿ ಸಿಂಗ್ ಧೋನಿ ಕ್ಯಾಮರಾಗಳಿಗೆ

ಮುಖ ಮುಚ್ಚಿ 'ಮಾಹಿ' ಟ್ಯಾಟೂ ಬಿಚ್ಚಿಟ್ಟ ಸಾಕ್ಷಿ
ಸಾಕ್ಷಿ ಸಿಂಗ್ ಧೋನಿ ಅವರ ಕತ್ತಿನ ಮೇಲೆ ಹುಯ್ಯಿಸಿಕೊಂಡಿದ್ದ "ಮಾಹಿ" ಹಚ್ಚೆ
Published On :

ಕಳೆದ ಐಪಿಎಲ್ ಫೈನಲ್ಸ್ ಪಂದ್ಯ ಧೋನಿಯವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನಿಜವಾಗಿಯೂ ನಿರಾಸೆ ಆದರೆ ಸದಾ ಹಸನ್ಮುಖಿ ಸಾಕ್ಷಿ ಸಿಂಗ್ ಧೋನಿ ಕ್ಯಾಮರಾಗಳಿಗೆ ಮುಖ ಮುಚ್ಚಿ ಅವರ ಕತ್ತಿನ ಮೇಲೆ ಹುಯ್ಯಿಸಿಕೊಂಡಿದ್ದ "ಮಾಹಿ" ಹಚ್ಚೆಯನ್ನು ಬಿಚ್ಚಿಟ್ಟಿದ್ದಾರೆ.

೨೦೧೦ ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮದುವೆಯಾದಾಗಲಿಂದಲು ಕ್ರಿಕೆಟ್ ಆಟದ ಅತಿ ದೊಡ್ಡ ಅಭಿಮಾನಿಯಾಗಿದ್ದಾರೆ ಸಾಕ್ಷಿ.

ಕೆಲವು ಕ್ರಿಕೆಟ್ ನಿಯಮಗಳ ಬಗ್ಗೆ ತಮ್ಮೊಂದಿಗೆ ಹಲವಾರು ಬಾರಿ ವಾಗ್ವಾದಕ್ಕಿಳಿಯುತ್ತಿದ್ದರು ಸಾಕ್ಷಿ, ನಾನು ಇವುಗಳಿಗೆ ಸಂಯಮದಿಂದ ಕಾರಣಗಳನ್ನು ತಿಳಿಸುತ್ತಿದ್ದೆ ಎಂದು ಧೋನಿ ಖಾಸಗಿ ವಾಹಿನಿಯೊಂದಕ್ಕೆ ಒಮ್ಮೆ ಹೇಳಿದ್ದರು.

ಈಗ ಧೋನಿ ತಂದೆಯಾಗಿದ್ದು, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಆಡುತ್ತಿದ್ದು, ತನ್ನ ಪತ್ನಿ ಸಾಕ್ಷಿ ಮತ್ತು ಮಗಳು ಜೀವಾಗಿಂತಲೂ ದೊಡ್ಡ ಅಭಿಮಾನಿಗಳಿಲ್ಲ. ಎಷ್ಟೇ ನಿರಾಶೆಯಾದರೂ ಸಂಯಮದಿಂದ ವರ್ತಿಸುವ ಧೋನಿ, ತಮ್ಮ ಪತ್ನಿ ತಮ್ಮ ಹಸನ್ಮುಖವನ್ನು ಮುಚ್ಚಿಕೊಂಡಾಗ ತಮ್ಮ ಬಾಳಸಂಗಾತಿಯ ಹೆಸರಿನ ಟ್ಯಾಟು ಪ್ರದರ್ಶನವಾದದ್ದು ಹೀಗೆ!   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.