ಬೀಭತ್ಸ ನಾಡಿನಲ್ಲಿ ಉತ್ಸಾಹದ ರಂಗು
ಬಿರುಬೇಸಿಗೆಯಲ್ಲಿ ಮಡಿಲಲ್ಲಿರುವ ಪಾಕಿಸ್ತಾನದಲ್ಲಿ ಈಗ ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜಿಂಬಾಬ್ವೆ ತಂಡ ಇದೀಗ ಪಾಕಿಸ್ತಾನದಲ್ಲಿ ಸರಣಿ ಆಡುವ...

ಲಾಹೋರ್: ಬಿರುಬೇಸಿಗೆಯಲ್ಲಿ ಮಡಿಲಲ್ಲಿರುವ ಪಾಕಿಸ್ತಾನದಲ್ಲಿ ಈಗ ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜಿಂಬಾಬ್ವೆ ತಂಡ ಇದೀಗ ಪಾಕಿಸ್ತಾನದಲ್ಲಿ ಸರಣಿ ಆಡುವ ಮೂಲಕ ತಮ್ಮ ದೇಶಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿ ಕಾಲಿಟ್ಟಿದ್ದಕ್ಕೆ ಇಡೀ ಪಾಕಿಸ್ತಾನವೇ ಸಂಭ್ರಮದಲ್ಲಿ ಮುಳುಗಿದೆ.
ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಉತ್ಸಾಹದಿಂದ ರೋಮಾಂಚನಗೊಂಡಿರುವ ಕ್ರಿಕೆಟ್ ಅಭಿಮಾನಿಗಳು, ಟಿಕೆಟ್‍ಗಳಿಗಾಗಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲೂ ಗಡಾಫಿ ಕ್ರೀಡಾಂಗಣದ ಸುತ್ತಲೂ ಗಿರಕಿಹೊಡೆಯುತ್ತಿದ್ದಾರೆ. ಕ್ರೀಡಾಂಗಣದ ಸುತ್ತಲೂ ಜನಜಾತ್ರೆ ನಿರ್ಮಾಣವಾಗಿದೆ. 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ದಾಳಿ ನಡೆದಿತ್ತು. ಇದೇ ಕಾರಣಕ್ಕಾಗಿ, ಪಾಕಿಸ್ತಾನದಲ್ಲಿ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಅಥವಾ ಸರಣಿ ನಡೆದಿರಲಿಲ್ಲ.
2011ರ ವಿಶ್ವಕಪ್ ಆತಿಥ್ಯವಹಿಸಿಕೊಳ್ಳುವ ಆತಿಥ್ಯವಹಿಸಿಕೊಳ್ಳುವುದರಿಂದಲೂ ಆ ದೇಶ ವಂಚಿತವಾಗಿತ್ತು. ಈಗ ಕಾಲ ಸರಿದಿದೆ. ಶುಕ್ರವಾರ ಜಿಂಬಾಬ್ವೆ-ಪಾಕಿಸ್ತಾನ ನಡುವೆ ಟಿ20 ಪಂದ್ಯ ನಡೆಯುವುದರೊಂದಿಗೆ 6 ವರ್ಷಗಳ ಕ್ರಿಕೆಟ್ ಬರ ನೀಗಿದೆ. ಇದೇ ಖುಷಿಯಲ್ಲಿ ಪಾಕಿಸ್ತಾನದ ಹಲವಾರು ಸೆಲೆಬ್ರಿಟಿಗಳು, ಖ್ಯಾತ ರಾಜಕಾರಣಿಗಳು ಖುದ್ದು ಆಗಮಿಸಿ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ.
ಬಿಗಿಭದ್ರತೆ
ಸರಣಿಯನ್ನು ಸವಾಲಾಗಿ ತೆಗೆದುಕೊಂಡಿರುವ ಪಾಕಿಸ್ತಾನ ಸರ್ಕಾರ, ಇಡೀ ಸರಣಿಗೆ ಭಾರಿ ಬಿಗಿಭದ್ರತೆ ನೀಡಿದೆ. ಪಂದ್ಯಗಳು ನಡೆಯಲಿರುವ ಗಡಾಫಿ ಕ್ರೀಡಾಂಗಣಕ್ಕೆ 3000 ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, ಕ್ರೀಡಾಂಗಣದ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್‍ಗಳ ಭಾರೀ ಭದ್ರತೆಯನ್ನೇ ನೀಡಲಾಗಿದೆ. ಶುಕ್ರವಾರ ಕ್ರೀಡಾಂಗಣಕ್ಕೆ ಇತ್ತಂಡಗಳು ಹೊರಟಾಗ ಎರಡೂ ತಂಡಗಳಿದ್ದ ಬಸ್‍ಗಳಿಗೆ ಭಾರಿ ಬಿಗಿಭದ್ರತೆ ಒದಗಿಸಲಾಗಿತ್ತು. ಡಜನ್ ಗಟ್ಟಲೆ ಪೊಲೀಸ್ ವಾಹನಗಳು ಬಸ್‍ಗಳನ್ನು ಸುತ್ತುವರಿದಿದ್ದವು. ಅಲ್ಲದೆ, ಎರಡೂ ಬಸ್ ಗಳನ್ನು ಹೆಲಿಕಾಪ್ಟರ್‍ಗಳ ಮೂಲಕ ಕಣ್ಗಾವಲಿರಿಸಲಾಗಿತ್ತು ಎಂದು ವಾಲ್ ಸ್ಟ್ರೀಟ್ ವೆಬ್‍ಸೈಟ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


