ಮುಕ್ತ ಟೆನಿಸ್: ಪುಂಗಲಿಯಾಗೆ ಗೆಲವು
ಉತ್ತಮ ಆಟ ಪ್ರದರ್ಶಿಸಿದ ಮಹಾರಾಷ್ಟ್ರದ ಜಯೇಶ್ ಪುಂಗಲಿಯಾ ಇಲ್ಲಿ ಶುಕ್ರವಾರದಿಂದ ಆರಂಭಗೊಂಡ ಅಂತಾರಾಷ್ಟ್ರೀಯ ಮಟ್ಟದ ಪುರುಷರ...

ಕನ್ನಡಪ್ರಭ ವಾರ್ತೆ, ಮಂಡ್ಯ : ಉತ್ತಮ ಆಟ ಪ್ರದರ್ಶಿಸಿದ ಮಹಾರಾಷ್ಟ್ರದ ಜಯೇಶ್ ಪುಂಗಲಿಯಾ ಇಲ್ಲಿ ಶುಕ್ರವಾರದಿಂದ ಆರಂಭಗೊಂಡ ಅಂತಾರಾಷ್ಟ್ರೀಯ ಮಟ್ಟದ ಪುರುಷರ 10 ಸಾವಿರ ಡಾಲರ್ ಮುಕ್ತ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ತಮಿಳುನಾಡಿನ ಅಭಿನವ ಸಂಜೀವ್ ಷಣ್ಮುಗಮ್ ಅವರನ್ನು ಪರಾಭವಗೊಳಿಸಿದ್ದಾರೆ.
ರಾಜ್ಯ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಗರದ ಪಿಇಟಿ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗಾಗಿ ಮೂರು ಗಂಟೆಗಳ ಕಾಲ ಸೆಣೆಸಿದ ಅಬಿsನವ ಷಣ್ಮುಗಮ್ ರವರು 6-3, 5-7, 4-6 ರ ಅಂತರದಿಂದ ಪುಂಗಲಿಯಾ ಎದುರು ಸೋಲು ಅನುಭವಿಸಿದರು.
ಇರ್ಫಾನ್ ಹುಸೇನ್ 6-0, 6-0 ನೇರ ಸೆಟ್ ಗಳಿಂದ ಮೈಸೂರಿನ ಮೋಹಿತ್ ಮನೋಹರನ್ ಅವರನ್ನು ಮಣಿಸಿದರೆ, ದೆಹಲಿಯ ಗ್ಯಾರಿ ಟೋಕಸ್, ಬೆಂಗಳೂರಿನ ರಿಶಿ ರೆಡ್ಡಿ ನೀಡಿದ ಕಠಿಣ ಸವಾಲನ್ನು ಎದುರಿಸಿ 6-7 (8), 7-6 (5), 7-5 ಅಂತರದಿಂದ ಗೆಲವು ಸಾಧಿಸಿದರು. ಬೆಂಗಳೂರಿನವರಾದ ರಷೇನ್ ಸಾಮ್ಯುಯಲ್ ಅವರು ಪೂರ್ವ ಎಸ್ ಕುಮಾರ್ ವಿರುದ್ಧ 6-4, 6-3ರ ನೇರ ಸೆಟ್ ಗಳಿಂದ ಜಯಗಳಿಸಿದರು. ನಂತರದ ಪಂದ್ಯಗಳಲ್ಲಿ ಆದಿತ್ಯಾ ತಿವಾರಿ 6-2, 6-4 ಸೆಟ್ ಗಳಿಂದ ದರ್ಶನ್ ಶ್ರೀನಿವಾಸ್ ರನ್ನು ಮಣಿಸಿದರೆ, ಸಿದ್ದಾರ್ಥ ವಿಶ್ವಕರ್ಮ 7-6 (8), 4-6, 6-4 ಸೆಟ್ ಗಳಿಂದ ಅನುರಾಗ್ ನೇನ್ವಾನಿ ಅವರನ್ನು ಪರಾಭವಗೊಳಿಸಿದರು.
ಮಂದೀರ್ ಸಿಂಗ್ 1-6, 6-3, 5-7 ಅಂತರದಿಂದ ಬಸೀಲ್ ಖುಮಾ, ವೈಷ್ಣವ್ ಬೆಂಡಾಲಮ್ 2-6, 1-6 ನೇರ ಸೆಟ್ಗಳಿಂದ ಸಾಹಿಲ್ ಗವಾರೆ ಎದುರು ಶರಣಾದರು. ಆದಿತ್ಯಾ ದೇಸ್ವಾಲ್ 6-3, 6-4 ಅಂತರದಿಂದ ರೋಹನ್ ಬಾಟಿಯಾ , ಹದೀನ್ ಬಾವಾ 6-1, 6-1 ಸೆಟ್ ಗಳಿಂದ
ನವಾಜ್ ಸಯ್ಯದ್, ರಾಹುಲ್ ರಾಬೀನ್ ಸನ್ 6-2, 6-0 ಅಂತರದಿಂದ ಶಾನೆ ಬಿದ್ದಯ್ಯ ವಿರುದಟಛಿ ಗೆಲವಿನ ನಗೆಬೀರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


