ಸಾನಿಯಾ -ಹಿಂಗಿಸ್ ಜೋಡಿ ಫೈನಲ್‍ಗೆ
ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅವರು ಜೊತೆಗಾತಿ, ಸ್ವಿಡ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ...

ರೋಮ್ : ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅವರು ಜೊತೆಗಾತಿ, ಸ್ವಿಡ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ, ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತನ್ನು ತಲುಪಿದೆ.
ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಈ ಜೋಡಿ, ಫ್ರಾನ್ಸ್ ನ ಕ್ಯಾರೊಲಿನ್ ಗಾರ್ಸಿಯಾ ಹಾಗೂ ಸ್ಲೊವಾಕಿಯಾದ ಕಟಾರಿನಾ ಸ್ರೆಬೊಟ್ನಿಕ್ ಜೋಡಿಯನ್ನು 6-2, 7-6 (7--5) ಸೆಟ್‍ಗಳ ಅಂತರದಲ್ಲಿ ಪರಾಭವಗೊಳಿಸಿತು. ಸುಮಾರು 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಅನಾಯಾಸವಾಗಿ ಗೆದ್ದ ಸಾನಿಯಾ-ಹಿಂಗಿಸ್ ಜೋಡಿಯು, ಎರಡನೇ ಸೆಟ್‍ನಲ್ಲಿ ಎದುರಾಳಿ ಜೋಡಿಯಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೂ, ಮಣಿಯದೇ ತೀವ್ರ ಪೈಪೋಟಿ ನೀಡಿದ ಫಲವಾಗಿ, ದ್ವಿತೀಯ ಸೆಟ್ ಟೈಬ್ರೇಕರ್ ಗೆ ಬಂದು ನಿಂತಿತು. ಆನಂತರ ಮುಂದುವರಿದ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಾನಿಯಾ-ಹಿಂಗಿಸ್, ಈ ಸೆಟ್‍ನೊಂದಿಗೆ ಪಂದ್ಯವನ್ನೂ ಗೆಲ್ಲುವಲ್ಲಿ ಯಶಸ್ವಿಯಾ ದರು.
ಪ್ರಶಸ್ತಿ ಸುತ್ತಿನಲ್ಲಿ ಹಂಗೇರಿ-ಫ್ರಾನ್ಸ್ ನ ಜೋಡಿಯಾದ ಟಿಮಿಯಾ ಬ್ಯಾಬೊಸ್ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್ ಜೋಡಿಯನ್ನು ಎದುರಿಸಲಿರುವ ಭಾರತ-ಸ್ವಿಸ್ ಜೋಡಿ, ಟ್ರೋಫಿಯೊಂದಿಗೆ ಸುಮಾರು 23 ಕೋಟಿ 76 ಲಕ್ಷ ರು. ಮೊತ್ತದ ಬಹುಮಾನವನ್ನು ಪಡೆಯುವ ಹೊಸ್ತಿಲಲ್ಲಿ ನಿಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


