ಕ್ರೀಡೆ

ಬ್ಯಾಟ್ ನಿಂದಲೇ ಟೀಕಾಕಾರರಿಗೆ ಸೂಕ್ತ ಉತ್ತರ ನೀಡುವೆ: ಯುವರಾಜ್

`ನನ್ನನ್ನು ಟೀಕಿಸುವವರಿಗೆ ನಾನು ಬ್ಯಾಟ್‍ನಿಂದಲೇ ಉತ್ತರಿಸುವೆ- ಇದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ಯುವರಾಜ್ ಸಿಂಗ್ ಅವರ ಗುಡುಗು.

ಬ್ಯಾಟ್ ನಿಂದಲೇ ಟೀಕಾಕಾರರಿಗೆ ಸೂಕ್ತ ಉತ್ತರ ನೀಡುವೆ: ಯುವರಾಜ್
ಯುವರಾಜ್ ಸಿಂಗ್
Published On :

ಮುಂಬೈ: `ನನ್ನನ್ನು ಟೀಕಿಸುವವರಿಗೆ ನಾನು ಬ್ಯಾಟ್‍ನಿಂದಲೇ ಉತ್ತರಿಸುವೆ- ಇದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ಯುವರಾಜ್ ಸಿಂಗ್ ಅವರ ಗುಡುಗು.

ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ವಿರುದ್ಧ ಯುವರಾಜ್ 57 ರನ್ ಸಿಡಿಸಿದ್ದರು. ಅವರ ಉತ್ತಮ ಪ್ರದರ್ಶನದಿಂದ ಡೆಲ್ಲಿ ತಂಡ, 20 ಓವರ್ ಗಳಲ್ಲಿ 152  ರನ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಅರ್ಧಶತಕ ಸಿಡಿಸಿದ ರೋಷಾವೇಶದಲ್ಲೇ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುವಿ, ತಮ್ಮ ವಿರುದ್ಧ ಸೊಲ್ಲೆತ್ತಿದವರಿಗೆ ಹೀಗೆ ಮಾತಿನಲ್ಲಿ ಕುಟುಕಿದರು.
ಅವರು ಹಾಗೆ ಖಾರವಾಗಿ ಪ್ರತಿಕ್ರಿಯಿಸಲು ಕಾರಣವೂ ಇಲ್ಲದಿಲ್ಲ. ಇತ್ತೀಚೆಗೆ ಅವರ ಕಳಪೆ ಬ್ಯಾಟಿಂಗ್ ಹಲವರ ಬಾಯಿಗೆ ಆಹಾರವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಮಂಗಳವಾರ ಕೊಂಚ ಬಿರುನುಡಿಗಳನ್ನು ಉದುರಿಸಿದರು.

ನನ್ನ ಕೆಲಸ ಕೇಲವ ಕ್ರಿಕೆಟ್ ಆಡುವುದು. ಉತ್ತಮ ಆಟವಾಡಬೇಕೆನ್ನುವ ಗುರಿ ಹೊಂದಿರುತ್ತೇನೆ. ಟೀಕಾಕಾರರ ಕೆಲಸ ಮನಸ್ಸಿಗೆ ಬಂದಂತೆ ಬರೆಯುವುದು. ನಾವು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಸಲಿಗೆ ನಾನು ಅಂಥ ಬರಹಗಳನ್ನಾಗಲಿ, ಟಿವಿ ಕಾರ್ಯಕ್ರಮಗಳನ್ನಾಗಲಿ ನೋಡುವುದೇ ಇಲ್ಲ. ಅಷ್ಟು ಸಮಯವೂ ನನಗಿಲ್ಲ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.