ದೋಹಾಗೆ ಪಯಣ ಬೆಳೆಸಿದ ಭಾರತೀಯ ಅಥ್ಲೀಟ್ಸ್ ತಂಡ
22 ಮಂದಿಯ ಭಾರತೀಯ ಅಥ್ಲೀಟ್ ತಂಡ ಏಷಿಯನ್ ಯೂತ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ದೋಹಾಗೆ ಪಯಣ ಬೆಳೆಸಿದೆ.

ನವದೆಹಲಿ: 22 ಮಂದಿಯ ಭಾರತೀಯ ಅಥ್ಲೀಟ್ ತಂಡ ಏಷಿಯನ್ ಯೂತ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ದೋಹಾಗೆ ಪಯಣ ಬೆಳೆಸಿದೆ.
ಮೇ 8 ರಿಂದ ಮೇ 11 ರ ವರೆಗೆ 3 ದಿನಗಳ ಕಾಲ ನಡೆಯುವ ಏಷಿಯನ್ ಯೂತ್ ಚಾಂಪಿಯನ್ ಶಿಪ್ ನಲ್ಲಿ ಯುವ ಪ್ರತಿಭೆಗಳಾದ ಬೇಂತ್ ಸಿಂಗ್, ಜಿಸ್ನಾ ಮ್ಯಾಥ್ಯೂ, ತರಭೇತುದಾರರಾಗಿ ಪಿಟಿ ಉಷಾ, ತೇಜಸ್ವಿನಿ ಶಂಕರ್, ಅಭಿಷೇಕ್ ದ್ರಾಲ್, ಅಶಿಸ್ ಜಾಖರ್ ಸೇರಿದಂತೆ 22 ಮಂದಿ ಭಾಗವಹಿಸಲಿದ್ದಾರೆ.
ಈ ಚ್ಯಾಂಪಿಯನ್ ಶಿಪ್ ನಲ್ಲಿ ಸುಮಾರು 40 ದೇಶದ 400 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 170 ಕೋಚ್ ಗಳು ಹಾಗೂ ವೈದ್ಯರು ಪಾಲ್ಗೋಳ್ಳಲಿದ್ದಾರೆ.
ಏಪ್ರಿಲ್ ನಲ್ಲಿ ಗೋವಾದಲ್ಲಿ ನಡೆದ ನ್ಯಾಷನಲ್ ಯೂತ್ ಚ್ಯಾಂಪಿಯನ್ ಶಿಪ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಈ ಆಟಗಾರರಿಗೆ ಸೋನ್ ಪೇಟ್ ನಲ್ಲಿ ತರಭೇತಿ ಕೂಡ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


