ಬಿಂದ್ರಾ, ಚೈನ್ ಸಿಂಗ್ ಗೆ ಸ್ವರ್ಣ ಡಬಲ್
ಹ್ಯಾನೋವರ್ ನಲ್ಲಿ ಭಾನುವಾರ ಮುಕ್ತಾಯವಾದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಬಿsನವ್ ಬಿಂದ್ರಾ ಅವರು ಎರಡು ಚಿನ್ನದ..

ನವದೆಹಲಿ: ಹ್ಯಾನೋವರ್ ನಲ್ಲಿ ಭಾನುವಾರ ಮುಕ್ತಾಯವಾದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಬಿsನವ್ ಬಿಂದ್ರಾ ಅವರು ಎರಡು ಚಿನ್ನದ ಪದಕಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದ ಮತ್ತೊಬ್ಬ ಉದಯೋನ್ಮುಖ ಶೂಟರ್ ಚೈನ್ ಸಿಂಗ್ ಅವರೂ ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಬಿಂದ್ರಾ ಅವರಿಗೆ ಮೊದಲ ಚಿನ್ನ ಬಂದರೆ, 10 ಮೀ. ಏರ್‍ರೈಫಲ್ ತಂಡಗಳ ವಿಭಾಗದಲ್ಲಿ ಬಿಂದ್ರಾ, ಚೈನ್ ಸಿಂಗ್ ಹಾಗೂ ಗಗನ್ ನಾರಂಗ್ ಅವರಿದ್ದ ತಂಡ ಚಿನ್ನದ ಗೌರವ ಪಡೆಯಿತು. ಪುರುಷರ 50 ಮೀ. ರೈಫಲ್ ಪ್ರೊನ್ ವಿಭಾಗದಲ್ಲಿ ಚೈನ್ ಸಿಂಗ್ ಅವರು ಮತ್ತೊಂದು ಚಿನ್ನದ ಗೌರವಕ್ಕೆ ಪಾತ್ರರಾದರು. ಪುರುಷರ 50 ಮೀ. ರೈಫಲ್ (3 ಪೊಸಿಷನ್) ವಿಭಾಗದಲ್ಲಿ ಗಗನ್ ನಾರಂಗ್ ಅವರು, ಕಂಚಿನ ಪದಕದ ಗೌರವ ಪಡೆದರೆ, ಕೊರಿಯಾದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಯಶಸ್ಸು ಗಳಿಸಿದ್ದ ಅಪೂರ್ವಿ ಚಾಂಡೇಲಾ ಅವರು ಮಹಿಳೆಯರ ರೈಫಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


