ಕ್ರೀಡೆ

ಧೋನಿ ಉತ್ತಮ ನಾಯಕ ಎಂಬುದಕ್ಕೆ ಸಾಕ್ಷಿ ಬೇಕಾ?

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 95 ರನ್‌ಗಳಿಗೆ ಪರಾಭವಗೊಂಡನಂತರ...

ಧೋನಿ ಉತ್ತಮ ನಾಯಕ ಎಂಬುದಕ್ಕೆ ಸಾಕ್ಷಿ ಬೇಕಾ?
ಮಹೇಂದ್ರ ಸಿಂಗ್ ಧೋನಿ
Published On :

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 95 ರನ್‌ಗಳಿಗೆ ಪರಾಭವಗೊಂಡನಂತರ  ನಾಯಕ ಮಹೇಂದ್ರ ಸಿಂಗ್ ಧೋನಿ ಜನರ ಟೀಕೆಗೆ ಒಳಗಾಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಎಲ್ಲ ಬ್ಯಾಟ್ಸ್‌ಮೆನ್ ಗಳು ನಿರಾಶಾದಾಯಕ ಪ್ರದರ್ಶನ ನೀಡಿದಾಗ ಧೋನಿ ಒಬ್ಬರೇ ಏಕಾಂಗಿ ವೀರನಂತೆ ಹೋರಾಡಿದ್ದರೂ, ಅವರ ಹೋರಾಟ ವ್ಯರ್ಥವಾಗಿತ್ತು.

ವಿಶ್ವಕಪ್ ಸೆಮಿಫೈನಲ್ ಪರಾಭವಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ವಿರುದ್ಧ ಎಲ್ಲೆಡೆಯಿಂದಲೂ ಟೀಕಾ ಪ್ರಹಾರಗಳು ಕೇಳಿ ಬರುತ್ತಿವೆ.  ಇದೀಗ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಧೋನಿಗೆ ರು.1000 ಚೆಕ್ ಕಳಿಸಿ ಲೇವಡಿ ಮಾಡಿದ್ದೂ ಸುದ್ದಿಯಾಗಿದೆ. ಅದರ ನಡುವೆಯೇ ಧೋನಿ ಯುವರಾಜ್ ಸಿಂಗ್‌ನ್ನು ಕೈ ಬಿಡುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂಬ ಕೂಗು ಕೂಡಾ ಇದೆ. ಇದೆಲ್ಲದರ ನಡುವೆ 28 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿದ್ದು ಇದೇ ಧೋನಿ ಎಂಬುದನ್ನು ನಾವು ಮರೆಯುವಂತಿಲ್ಲ.  ಈ ಭಾರಿ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರಬಹುದು. ಹಾಗಂತ ಧೋನಿ ಉತ್ತಮ ನಾಯಕನಲ್ಲ ಎಂದು ಹೇಳುವುದು ಸರಿಯಲ್ಲ. ಧೋನಿ ಉತ್ತಮ ನಾಯಕ ಎಂಬುದನ್ನು ಅವರು ಹಲವಾರು ಬಾರಿ ಸಾಬೀತು ಪಡಿಸಿದ್ದಾರೆ.

ಎಂಎಸ್ ಧೋನಿ ಕೂಲ್ ಕ್ಯಾಪ್ಟನ್. ಭಾರತ ಕಂಡ ಉತ್ತಮ ನಾಯಕ. ಈ ನಾಯಕನ ಬಗ್ಗೆ ಕ್ರಿಕೆಟ್ ದಿಗ್ಗಜರು ಏನು ಹೇಳಿದ್ದಾರೆ ಗೊತ್ತಾ?

ನಾನು ಆಡಿದ ಟೀಂಗಳ ನಾಯಕತ್ವ ವಹಿಸಿದವರಲ್ಲಿ ಧೋನಿಯೇ ಬೆಸ್ಟ್ - ಸಚಿನ್ ತೆಂಡೂಲ್ಕರ್

ನಮ್ಮ ದೇಶದಲ್ಲಿ ಧೋನಿ ಅತ್ಯುತ್ತಮ ನಾಯಕ. ಆತನ ದಾಖಲೆಗಳೇ ಇದಕ್ಕೆ ಸಾಕ್ಷಿ - ಸೌರವ್ ಗಂಗೂಲಿ

ಧೋನಿ ನನ್ನ ಹೀರೋ. ನಾವು ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಬಗ್ಗೆ ತುಂಬಾ ಮಾತಾಡುತ್ತೇವೆ. ಆದರೆ ಈ ಹುಡುಗನಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟ್ ಇದೆ - ಕಪಿಲ್ ದೇವ್

ನಾನು ಸಾಯುವ ಹೊತ್ತಲ್ಲಿ ಧೋನಿ 2011 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೊಡೆದ ಸಿಕ್ಸರ್ ನೋಡೋಕೆ ಇಚ್ಛಿಸುತ್ತೇನೆ  - ಸುನಿಲ್ ಗವಾಸ್ಕರ್

ಅವರೊಬ್ಬ ಉತ್ತಮ ನಾಯಕ. ಅವರ ಸಂಯಮ ಮತ್ತು ಸಮಯೋಜಿತ ನಿರ್ಧಾರಗಳಿಗೆ ನಾನು ಅವರನ್ನು ಮೆಚ್ಚುತ್ತೇನೆ - ರಾಹುಲ್ ದ್ರಾವಿಡ್

ಅವರೊಬ್ಬ ಗ್ರೇಟ್ ಫಿನಿಶರ್. ಅವರು ತುಂಬಾನೇ ಕೂಲ್ ಮತ್ತು ಸಮಾಧಾನದ ವ್ಯಕ್ತಿ. ಅದೇ ಅವರ ಹೆಗ್ಗಳಿಕೆಯೂ ವ್ಯಕ್ತಿತ್ವವೂ ಆಗಿದೆ  -ಮಹೇಲಾ ಜಯವರ್ಧನೆ

ನಾನು ಧೋನಿಯಿಂದ ನಾಯಕತ್ವದ ಗುಣಗಳನ್ನು ಕಲಿಯುತ್ತಿದ್ದೇನೆ  -ಡಿಜೆ ಬ್ರಾವೋ

ಧೋನಿ ಪಂದ್ಯದ ಕೊನೆಯವರೆಗೆ ಆಡುತ್ತಾರೆ ಎಂದಾದರೆ ಒಂದಂತೂ ನಿಜ, ಅವರು ಆ ಪಂದ್ಯವನ್ನು ಗೆಲ್ಲಿಸಿರುತ್ತಾರೆ - ಹರ್ಷ ಭೋಗ್ಲೆ

ನಿಮಗೆ ಬ್ಯಾಟಿಂಗ್ ಕಲಿಯಬೇಕೆ? ಹಾಗಾದರೆ ಎಂಎಸ್ ಧೋನಿ ಜತೆ ಬ್ಯಾಟಿಂಗ್ ಮಾಡಿ - ರವೀಂದ್ರ ಜಡೇಜಾ

ಐಪಿಎಲ್ ಪ್ರಥಮ ಆವೃತ್ತಿಯ ಹರಾಜಿನಲ್ಲಿ ನಾವು ಧೋನಿಯನ್ನು ಖರೀದಿಸಲು ಪ್ರಯತ್ನಿಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ -ವಿಜಯ್ ಮಲ್ಯ

ಧೋನಿ ನಾಯಕತ್ವದಲ್ಲಿ ಆಡಲು ನಾನು ಪುಣ್ಯ ಮಾಡಿದ್ದೆ -ಮೈಕಲ್ ಹಸ್ಸಿ

ಕೊನೆಯ ಓವರ್‌ನಲ್ಲಿ 15 ರನ್ ಬೇಕೆಂದಾದರೆ ಬೌಲರ್‌ಗೆ ಒತ್ತಡವಿರುತ್ತದೆ..ಎಂಎಸ್ ಧೋನಿಗೆ ಅಲ್ಲ -ಇಯಾನ್ ಬಿಷಪ್

ವಿಶ್ವದಲ್ಲಿನ ಕೂಲೆಸ್ಟ್ ವ್ಯಕ್ತಿ, ಕ್ರಿಕೆಟ್ ಪಂದ್ಯದಲ್ಲಿ ಅಗತ್ಯವಿದೆ ಎನ್ನುವ ಸಮಯದಲ್ಲಿ ಸಹಾಯಕ್ಕೆ  ನಿಲ್ಲುವ ವ್ಯಕ್ತಿ ಅವರು -ಮೈಕಲ್ ವೇಗನ್

ಡೆತ್ ಓವರ್‌ಗಳಲ್ಲಿ ನೀವು ಧೋನಿಗೆ ಸ್ಪಿನ್ ಎಸೆತಗಳನ್ನು ಎಸೆಯಲಾಗುವುದಿಲ್ಲ. ಅವರು ವಿಶ್ವದ ಬೆಸ್ಟ್ ನಾಯಕ -ಅಲಾಸ್ಟೈರ್ ಕುಕ್

ಅವರೊಬ್ಬ ಕ್ರಿಕೆಟರ್ ಮಾತ್ರವಲ್ಲ ನಾಯಕನಾಗಿ ಬೆಳೆದಿದ್ದಾರೆ. ಅವರ ದಾಖಲೆಗಳನ್ನು  ನೋಡಿದರೆ ಭಾರತ ಕ್ರಿಕೆಟ್ ಟೀಂ ಪಡೆದ ಅತ್ಯುತ್ತಮ ನಾಯಕ ಅವರು - ವಸೀಂ ಅಕ್ರಮ್

ನಾನು ಟೀಂ ಒಂದನ್ನು ಆಯ್ಕೆ ಮಾಡುವುದಾದರೆ ಅದರಲ್ಲಿ ಸಚಿನ್ ಓಪನರ್ ಆಗುತ್ತಾನೆ. ಧೋನಿ ನಾಯಕನಾಗಿರುತ್ತಾನೆ - ಸ್ಟೀವ್ ವೋ

ಕೆಕೆಆರ್ ತಂಡದಲ್ಲಿ ಎಂಎಸ್ ಧೋನಿ ಇರಬೇಕೆಂದು ನಾನು ಬಯಸುತ್ತೇನೆ -ಶಾರುಖ್ ಖಾನ್ (ಕೆಕೆಆರ್)

ರಾಂಚಿಯಿಂದ ಎಂಎಸ್ ಧೋನಿ ಕ್ರಿಕೆಟರ್ ಆಗಿ ಬೆಳೆದಂತೆ, ಅಲ್ಲಿಂದ ಟೆನಿಸ್ ಕ್ರೀಡಾಪಟುಗಳೂ ಹೊರಬರಲಿ -ಸಾನಿಯಾ ಮಿರ್ಜಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.