ವಿಶ್ವಕಪ್ ಫೈನಲ್: 183 ರನ್ ಗಳಿಗೆ ನ್ಯೂಜಿಲೆಂಡ್ ಆಲ್ ಔಟ್
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಕೇವಲ 183 ರನ್ ಗಳಿಗೆ ಆಲ್ ಔಟ್ ಆಗಿದೆ...

ಮೆಲ್ಬೋರ್ನ್: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಕೇವಲ 183 ರನ್ ಗಳಿಗೆ ಆಲ್ ಔಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಕೇವಲ 45 ಓವರ್ ಗಳಲ್ಲಿ 183 ರನ್ ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿದರೆ ಯಾವೊಬ್ಬ ಆಟಗಾರನೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಬರೋಬ್ಬರಿ 4 ಮಂದಿ ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದು, ನ್ಯೂಜಿಲೆಂಡ್ ಹಿನ್ನಗೆ ಕಾರಣವಾಯಿತು. ಈಡೀ ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿ ನಾಯಕ ಮೆಕ್ಕಲಮ್ ಸೇರಿದಂತೆ ಉಳಿದ ಯಾವ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ.
ನ್ಯೂಜಿಲೆಂಡ್ ಪರ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (15ರನ್), ಮೆಕ್ಕಲಮ್ (0) ಮತ್ತು ವಿಲಿಯಮ್ಸನ್ (12) ಬೇಗನೇ ಔಟಾದರು. ಆ ಬಳಿಕ ಬಂದ ಟೇಲರ್ (40 ರನ್) ಮತ್ತು ಇಲಿಯಟ್ (83 ರನ್) ಉತ್ತಮ ಜೊತೆಯಾಟ ಆಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ ಪಂದ್ಯದ 36ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ, ಟೇಲರ್ ಹಡ್ಡಿನ್ ವಿಕೆಟ್ ಒಪ್ಪಿಸಿ ಔಟಾದರು. ಆ ಬಳಿಕ ಬಂದ ಆ್ಯಂಡರ್ ಸನ್ ಮತ್ತು ರೋಂಚಿ ಶೂನ್ಯಕ್ಕೆ ಔಟಾದರು. ಬಳಿಕ ಕ್ರೀಸ್ ಗೆ ಆಗಮಿಸಿದ ವೆಟ್ಟೋರಿ, ಎಲಿಯಟ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದರು. ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ವೆಟ್ಟೋರಿ 23 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಜಾನ್ಸನ್ ಬೌಲಿಂಗ್ ನಲ್ಲಿ ಔಟಾದರು. ಆಗ ನ್ಯೂಜಿಲೆಂಡ್ ತಂಡದ ಮೊತ್ತ ಕೇವಲ 171 ರನ್ ಗಳಾಗಿತ್ತು.
ವೆಟ್ಟೋರಿ ಅವರ ಹಿಂದೆಯೇ 83 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಎಲಿಯಟ್ ಕೂಡ ಇಲ್ಲದ ಹೊಡೆತಕ್ಕೆ ಮುಂದಾಗಿ ಫಾಲ್ಕ್ ನರ್ ಎಸೆತದಲ್ಲಿ ಹಡ್ಡಿನ್ ಗೆ ಕ್ಯಾಚ್ ನೀಡಿ ಹೊರನಡೆದರು. ಎಲಿಯಟ್ ಔಟ್ ಆಗುವುದರರೊಂದಿಗೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಕೂಡ ಬಹುತೇಕ ಅಂತ್ಯಗೊಂಡಿತ್ತು. ಏಕೆಂದರೆ ಎಲಿಯಟ್ ನಂತರ ಬಂದ ಬಾಲಂಗೋಚಿ ಆಟಗಾರರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ಮಾಡುವುದರೊಂದಿಗೆ 183 ರನ್ ಗಳಿಗೆ ಆಲ್ ಔಟ್ ಆಯಿತು. ಆಸ್ಟ್ರೇಲಿಯಾ ಪರ ಸ್ಟಾರ್ಕ್ 2 ವಿಕೆಟ್, ಫಾಲ್ಕ್ ನರ್ 3 ವಿಕೆಟ್, ಮಿಚೆಲ್ ಜಾನ್ಸನ್ 3 ವಿಕೆಟ್ ಮತ್ತು ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡದ ಪತನಕ್ಕೆ ಕಾರಣವಾದರು.
ಆಸ್ಟ್ರೇಲಿಯಾಗೆ ಆರಂಭಿಕ ಆಘಾತ
ಇನ್ನು 183 ರನ್ ಗಳ ಸಾಧಾರಣ ಮೊತ್ತದ ಗುರಿ ಬೆನ್ನುಹತ್ತಿರುವ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿದ್ದು, ಫಿಂಚ್ ಬೌಲ್ಟ್ ಬೌಲಿಂಗ್ ಶೂನ್ಯಕ್ಕೆ ಔಟಾದರು. ಪ್ರಸ್ತುತ ಕ್ರೀಸ್ ನಲ್ಲಿರುವ ಡೇವಿಡ್ ವಾರ್ನರ್ 15 ರನ್ ಗಳಿಸಿದ್ದು, ಸ್ಮಿತ್ ಈಗಷ್ಟೇ ಕ್ರೀಸ್ ಗೆ ಆಗಮಿಸಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ತಂಡ 4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


