ಸೈನಾ ಮುಡಿಗೆ ಇಂಡಿಯನ್ ಓಪನ್ ಕಿರೀಟ
ಇಂಡಿಯನ್ ಓಪನ್ ಸೂಪರ್ ಸೀರೀಸ್ ಫೈನಲ್ ಪಂದ್ಯದಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಜಯ ಗಳಿಸಿದ್ದಾರೆ...

ನವದೆಹಲಿ: ಇಂಡಿಯನ್ ಓಪನ್ ಸೂಪರ್ ಸೀರೀಸ್ ಫೈನಲ್ ಪಂದ್ಯದಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಜಯ ಗಳಿಸಿದ್ದಾರೆ.
ಸಿರಿ ಫೋರ್ಟ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಥಾಯಿಲ್ಯಾಂಡ್‌ನ ರಾಟ್‌ಚನೋಕ್ ಇಂಟನಾನ್ ಅವರನ್ನು 49 ನಿಮಿಷದಲ್ಲಿ ನೇರ ಸೆಟ್ ಗಳಿಂದ 21-16, 21-14 ಅಂತರದಲ್ಲಿ ಪರಾಭವಗೊಳಿಸಿ ಸೈನಾ ಇಂಡಿಯನ್ ಓಪನ್ ಕಿರೀಟ ಮುಡಿಗೇರಿಸಿ ಕೊಂಡಿದ್ದಾರೆ.
ಈ ಕಿರೀಟ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ ಸೈನಾ.
ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಸೈನಾ ಫೈನಲ್ ಪಂದ್ಯ ಗೆಲ್ಲುವ ಮುನ್ನವೇ ಬ್ಯಾಡ್ಮಿಂಟನ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದರು. ಸೈನಾಳ ಸಮಾನ ಸ್ಪರ್ಧಿ ಸ್ಪೇನ್‌ನ ಕರೋಲಿನಾ ಮರಿನ್ ಸೆಮಿಫೈನಲ್‌ನಲ್ಲಿ ರಾಟ್‌ಚನೋಕ್ ವಿರುದ್ಧ ಪರಾಭವಗೊಂಡಾಗ ಸೈನಾ ಅಗ್ರ ಸ್ಥಾನಕ್ಕೆ ಜಿಗಿದಿದ್ದರು.
ನನ್ನ ಕನಸು ನನಸಾಗಿದೆ. ನಾನೀಗ ನಂಬರ್ ಒನ್ ಸ್ಥಾನಕ್ಕೇರಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದು ತುಂಬಾ ದೊಡ್ಡ ಪಯಣವಾಗಿತ್ತು ಎಂದು ಸೈನಾ ಹೇಳಿದ್ದಾರೆ.
ಈ ಸಾಧನೆಗೆ ನಾನು ವಿಮಲ್ ಕುಮಾರ್ ಸರ್ ಮತ್ತು ನನ್ನ ಹೆತ್ತವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮೇ ತಿಂಗಳಾಗುವಾಗ ನಾನು ನಂಬರ್ 1 ಸ್ಥಾನಕ್ಕೇರುತ್ತೇನೆಂದು ವಿಮಲ್ ಸರ್ ಹೇಳಿದ್ದರು. ಈಗಲೂ ನನಗಿದನ್ನು ವಿಶ್ವಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಸೈನಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


