ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳುವೆ: ಶ್ರೀಶಾಂತ್
ಶೀಘ್ರದಲ್ಲೇ ನಾನು ಕ್ರಿಕೆಟ್ ಲೋಕಕ್ಕೆ ವಾಪಸ್ ಬರುತ್ತೇನೆಂದು ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಶ್ರೀಶಾಂತ್ ಹೇಳಿದ್ದಾರೆ...

ಕೊಚ್ಚಿ: ಶೀಘ್ರದಲ್ಲೇ ನಾನು ಕ್ರಿಕೆಟ್ ಲೋಕಕ್ಕೆ ವಾಪಸ್ ಬರುತ್ತೇನೆಂದು ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಶ್ರೀಶಾಂತ್ ಹೇಳಿದ್ದಾರೆ. ದೇವರ ಕೃಪೆ ಇದ್ದರೆ ಮುಂದಿನ ಬಾರಿ ವಿಶ್ವಕಪ್ ಗೆಲ್ಲುವ ಭಾರತೀಯ ಟೀಂನಲ್ಲಿ ನಾನು ಸದಸ್ಯನಾಗಲಿದ್ದೇನೆ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.
ಇದಕ್ಕಾಗಿ ನಾನೀಗ ಕಠಿಣ ಪ್ರಯತ್ನ ಮಾಡುತ್ತಿದ್ದು, ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ನಾನು ತಾಳ್ಮೆಯಿಂದ ಕಾಯುತ್ತಿದ್ದೇನೆ ಎಂಬುದಾಗಿಯೂ ಶ್ರೀಶಾಂತ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ವಿಶ್ವಕಪ್ ತಂಡದಲ್ಲಿ ಭಾಗಿಯಾಗದೇ ಇರುವುದು ಅತೀವ ಬೇಸರದ ವಿಷಯ. ಈವರೆಗೆ ನನ್ನ ಮೇಲಿರುವ ಎಲ್ಲಾ ಆರೋಪಗಳಿಂದ ನಾನು ಮುಕ್ತನಾಗುವೆ ಎಂಬ ನಿರೀಕ್ಷೆ ನನಗಿದೆ. 2011 ಏಕದಿನ ಪಂದ್ಯ ವಿಶ್ವಕಪ್ ಮತ್ತು 2007ರ ಟ್ವೆಂಟಿ-20 ವಿಶ್ವಕಪ್ ನ್ನು ಭಾರತ ಗೆದ್ದಾಗಲೂ ಶ್ರೀಶಾಂತ್ ಈ ಟೀಂ ಸದಸ್ಯರಾಗಿದ್ದರು. ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್‌ನ ನಿರ್ಣಾಯಕ ಕ್ಯಾಚ್ ಹಿಡಿಯುವ ಮೂಲಕ ಶ್ರೀಶಾಂತ್ ಗಮನ ಸೆಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


