ಟೀಂ ಇಂಡಿಯಾಗೆ 329 ರನ್ ಗಳ ಬೃಹತ್ ಗುರಿ
ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ 329 ರನ್ ಗಳ ಬೃಹತ್ ಮೊತ್ತ ನೀಡಿದೆ.

ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ 329 ರನ್ ಗಳ ಬೃಹತ್ ಮೊತ್ತ ನೀಡಿದೆ.
ಭಾರತ ಆಸ್ಟ್ರೇಲಿಯಾ ನಡುವಿನ ಹೈವೋಲ್ಟೋಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಆಘಾತದಿಂದ ಚೇತರಿಸಿಕೊಂಡಿದೆ. ಆರಂಭಿಕ ಆಟಗಾರ ಫಿಂಚ್ ಮತ್ತು ಸ್ಮಿತ್ ಶತಕದ ಜತೆಯಾಟ ಆಸ್ಟ್ರೇಲಿಯಾ ಉತ್ತಮ ರನ್ ಪೇರಿಸಲು ಸಾಧ್ಯವಾಗಿದೆ.
ಆರಂಭಿಕರಾದ ಡೇವಿಡ್ ವಾರ್ನರ್ 12 ರನ್ ಗಳಿಸಿದರೆ ಫಿಂಚ್ 81 ರನ್ ಗಳಿಸಿ ಔಟಾದರು. ಸ್ಫೋಟಕ ಬ್ಯಾಟ್ಸ್ ಮನ್ ಸ್ಮಿತ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು, 93 ಎಸೆತಗಳಲ್ಲಿ 105 ಗಳಿಸಿದರು.
ಬಳಿಕ ಮ್ಯಾಕ್ಸ್ ವೆಲ್ 23, ವಾಟ್ಸನ್ 28, ಕ್ಲಾರ್ಕ್ 10 ಪ್ಲುಕ್ನರ್ 21 ರನ್ ಗಳಿಸಿ ಔಟಾದರೆ, ಹಡ್ಡಿನ್ ಅಜೇಯ 7 ರನ್ ಹಾಗೂ ಜಾನ್ಸನ್ 27 ರನ್ ಗಳಿಸಿದ್ದಾರೆ.
ಭಾರತ ಪರ ಉಮೇಶ್ ಯಾದವ್ 4 ವಿಕೆಟ್ ಪಡೆದರೆ, ಮೋಹಿತ್ ಶರ್ಮಾ 2 ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


