ಕ್ರೀಡೆ

ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾಗೆ ಮೂರನೆ ಸ್ಥಾನ

ಸ್ವಿಟ್ಜರ್ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಜೊತೆ ಬಿ ಎನ್ ಪಿ ಪರಿಬಾಸ್ ಪ್ರಶಸ್ತಿ ಗೆದ್ದ ನಂತರ ಈಗ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಡಬಲ್ಸ್

ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾಗೆ ಮೂರನೆ ಸ್ಥಾನ
ಸಾನಿಯಾ ಮಿರ್ಜಾ
Published On :

ನವದೆಹಲಿ: ಸ್ವಿಟ್ಜರ್ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಜೊತೆ ಬಿ ಎನ್ ಪಿ ಪರಿಬಾಸ್ ಪ್ರಶಸ್ತಿ ಗೆದ್ದ ನಂತರ ಈಗ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಡಬಲ್ಸ್ ರ್ಯಾಂಕಿಂಗ್ ಸ್ಥಾನ ಪೆದಿದ್ದಾರೆ. ಈಗ ಅವರದ್ದು ವಿಶ್ವ ಟೆನಿಸ್ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೆ ಸ್ಥಾನ.

ಸಾನಿಯಾ ೬೮೮೫ ಅಂಕಗಳೊಂದಿಗೆ, ಇಟಲಿಯ ರಾಬರ್ಟಾ ವಿಂಚಿ ಮತ್ತು ಸಾರಾ ಎರ್ರಾನಿ (ಇಬ್ಬರದ್ದು ೭೬೪೦ ಅಂಕ) ಅವರ ನಂತರದ ಸ್ಥಾನ ಪಡೆದಿದ್ದಾರೆ.

"ನನ್ನ ವೃತ್ತಿಜೀವನದ ಅತ್ಯುತ್ತಮ ರ್ಯಾಂಕ್ ಗಳಿಸಲು ಥ್ರಿಲ್ ಆಗಿದ್ದೇನೆ. ನಂಬರ್ ೧ ಸ್ಥಾನಕ್ಕೆ ಏರುವುದು ಕನಸು, ಅದು ಕೂಡ ಒಂದು ದಿನ ಈಡೇರುತ್ತದೆ ಎಂಬುದು ನನ್ನ ನಂಬಿಕೆ" ಎಂದು ಅಮೆರಿಕಾದಿಂದ ಸಾನಿಯಾ ತಿಳಿಸಿದ್ದಾರೆ.
 
ಮತ್ತೊಬ್ಬ ಖ್ಯಾತ ಆಟಗಾರ ಲಿಯಾಂಡರ್ ಪೇಸ್ ಡಬಲ್ಸ್ ರ್ಯಾಂಕಿಗ್ ಪಟ್ಟಿಯಲ್ಲಿ ೨೫ನೆ ಸ್ಥಾನಕ್ಕೆ ಕುಸಿದ್ದಿದ್ದರೆ ಅವರ ನಂತರದ ಸ್ಥಾನ ರೋಹನ್ ಬೋಪಣ್ಣ ಅವರದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.