ಭಾರತದ ವಿರುದ್ಧ ಪ್ರಾಬಲ್ಯ ಮುಂದುವರಿಸುತ್ತೇವೆ
ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಲಿರುವ ಆಸ್ಟ್ರೇಲಿಯಾ, ಪಂದ್ಯದ ಮುನ್ನವೇ ಮೈಂಡ್ ಗೇಮ್ ...

ಸಿಡ್ನಿ:ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಲಿರುವ ಆಸ್ಟ್ರೇಲಿಯಾ, ಪಂದ್ಯದ ಮುನ್ನವೇ ಮೈಂಡ್ ಗೇಮ್ ಆರಂಭಿಸಿದೆ. ಭಾರತದ ವಿರುದ್ಧ ತಮ್ಮ ಪ್ರಾಬಲ್ಯವನ್ನು ಮುಂದುವರಿಸುತ್ತೇವೆ ಎಂದು ಆಸೀಸ್ ಸ್ಫೋಟಕ ಬ್ಯಾಟ್ಸ್‍ಮನ್ ಗ್ಲೆನ್ ಮ್ಯಾಕ್ಸ್‍ವೆಲ್ ತಿಳಿಸಿದ್ದಾರೆ.ಭಾರತ ತಂಡ ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಹಾಗೂ ತ್ರಿಕೋನ ಏಕದಿನ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಆಗ ಪ್ರಭುತ್ವ ಸಾಧಿಸಿದ್ದ ಕಾಂಗರೂ ಪಡೆ, ಈಗಲೂ ಅದೇ ರೀತಿ ಟೀಂ ಇಂಡಿಯಾವನ್ನು ಕಟ್ಟಿ ಹಾಕುವ ವಿಶ್ವಾಸದಲ್ಲಿದೆ. ಕಳೆದ ಸರಣಿಗಳಲ್ಲಿ ನಾವು ಭಾರತದ ವಿರುದ್ಧ ಪ್ರಾಬಲ್ಯ ಮೆರೆದಿದ್ದೆವು. ಸಂಪೂರ್ಣ ಪ್ರವಾಸದಲ್ಲಿ ಭಾರತ, ನಮ್ಮ ವಿರುದ್ಧ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಎದುರಾಳಿ ತಂಡ ಒತ್ತಡದಲ್ಲಿದೆ. ಈ ಬಾರಿಯೂ ಅವರನ್ನು ನಿಯಂತ್ರಿಸುವ ವಿಶ್ವಾಸವಿದೆ ಎಂದು ಗ್ಲೆನ್ ಮ್ಯಾಕ್ಸ್ ವೆಲ್ಅಬಿsಪ್ರಾಯಪಟ್ಟಿದ್ದಾರೆ.
ಭಾರತ ಉತ್ತಮ ತಂಡ. ಇಲ್ಲವಾಗಿದ್ದರೆ, ವಿಶ್ವಕಪ್‍ನ ಸೆಮಿಫೈನಲ್ ವರೆಗೂ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾವು ಭಾರತದ ವಿರುದ್ಧ ಉತ್ತಮವಾಗಿ
ಆಡಲೇಬೇಕಿದೆ ಎಂದರು. ಇನ್ನು ಐಪಿಎಲ್‍ನ ಅನುಭವ ನೆರವಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಮ್ಯಾಕ್ಸ್ ವೆಲ್, ಐಪಿಎಲ್ ಟೂರ್ನಿ ವಿಶ್ವಕಪ್‍ಗಿಂತ ಬಿsನ್ನ. ಈ ವಿಶ್ವಕಪ್ ಟೂರ್ನಿ ಪರಿಸ್ಥಿತಿ ಹಾಗೂ ಒತ್ತಡವನ್ನು ನಿಭಾಯಿಸುವುದರ ಮೇಲೆ ನಿಂತಿದೆ. ನಾನು 6ನೇ ಕ್ರಮಾಂಕದಲ್ಲಿ ಆಡುತ್ತೇನೆ. ಅಗ್ರ ಬ್ಯಾಟ್ಸ್‍ಮನ್‍ಗಳು ಪರಿಸ್ಥಿತಿಯನ್ನು ಬಳಸಿಕೊಂಡು ಉತ್ತಮವಾಗಿ ಆಡುವ ವಿಶ್ವಾಸವಿದೆ. ಇನಿಂಗ್ಸ್ ಅನ್ನು ಉತ್ತಮವಾಗಿ ಮುಗಿಸುವುದು ನನ್ನ ಜವಾಬ್ದಾರಿ ಎಂದಿದ್ದಾರೆ.ಇನ್ನು ಕೊಹ್ಲಿ ವಿರುದ್ಧ ತಂತ್ರಗಾರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಮ್ಯಾಕ್ಸ್ವೆಲ್, ತಂಡ ಈ ಪಂದ್ಯದ ಬಗ್ಗೆ ಇನ್ನೂ ಚರ್ಚಿಸಿಲ್ಲ. ಕಳೆದ ಸರಣಿಗಳಲ್ಲಿ ಕೊಹ್ಲಿಯನ್ನು ನಿಯಂತ್ರಿಸಲು ರೂಪಿಸಿದ್ದ ತಂತ್ರಗಳನ್ನೇ ಈ ಬಾರಿಯೂ ಬಳಸುವ ಸಾಧ್ಯತೆ ಇದೆ. ಕಳೆದ ತ್ರಿಕೋನ ಸರಣಿಯಲ್ಲಿ ಕೊಹ್ಲಿಯನ್ನು ಉತ್ತಮವಾಗಿ ನಿಯಂತ್ರಿಸಿದ್ದೆವು. ಅದೇ ರೀತಿ ಈ ಬಾರಿಯು ಆಡಲಾಗುವುದು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


