ವಿಶ್ವಕಪ್ ಸೆಮಿಸ್: ಟೀಂ ಇಂಡಿಯಾ V/s ಆಸಿಸ್
2015ರ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ.

ಅಡಿಲೇಡ್: 2015ರ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದ್ದು, ಮಾರ್ಚ್ 28 ರಂದು ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿವೆ.
ಮೂರನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ಥಾನ ತಂಡ ಆಸೀಸ್‌ಗೆ ಗೆಲ್ಲಲು 214 ರನ್‌ಗಳ ಸಾಧಾರಣ ಮೊತ್ತಕ್ಕೆ ಔಟಾಯಿತು. 214 ರನ್‌ಗಳ ಸವಾಲು ಬೆನ್ನಟ್ಟಿದ್ದ ಆಸೀಸ್ 33.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಸಂಭ್ರಮಿಸಿತು.
ಆಸ್ಟ್ರೇಲಿಯಾ ಪರ ಫಿಂಚ್ ಕೇವಲ 2 ರನ್ ವಾರ್ನರ್ 24 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಸ್ಮಿತ್ ಉತ್ತಮವಾಗಿ ಬ್ಯಾಟ್ ಮಾಡಿ 65 ರನ್ ಗಳಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಾಟ್ಸನ್ ಅಜೇಯ 64 ರನ್ ಮತ್ತು ಮ್ಯಾಕ್ಸ್‌ವೆಲ್ ಅಜೇಯ 44 ರನ್ ಗಳಿಸಿದರು.
ಮೊದಲು ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿ ಆಸ್ಟ್ರೇಲಿಯಾಗೆ ಸವಾಲಿನ ಮೊತ್ತದ ಗುರಿ ನೀಡುವ ಪಾಕ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅವರ ಯೋಜನೆಗೆ ಆಸ್ಟ್ರೇಲಿಯಾದ ಬೌಲರ್ ಗಳಾದ ಹೇಝಲ್ ವುಡ್, ಸ್ಟಾರ್ಕ್ ಮತ್ತು ಮ್ಯಾಕ್ಸ್ ವೆಲ್ ಅವರ ದಾಳಿಗೆ ಕೇವಲ 213 ರನ್ ಗಳಿಗೆ ಕುಸಿದಿದೆ. ಹ್ಯಾರಿಸ್ ಸೊಹೈಲ್ (41 ರನ್), ನಾಯಕ ಮಿಸ್ ಬಾ ಉಲ್ ಹಕ್ (34 ರನ್) ಮತ್ತು ಸೊಹೇಬ್ ಮಕ್ಸೂದ್ (29 ರನ್) ಅವರನ್ನು ಹೊರತು ಪಡಿಸದರೆ ಪಾಕಿಸ್ತಾನದ ಬೇರಾವುದೇ ಆಟಗಾರ ಕೂಡ ಆಸ್ಟ್ರೇಲಿಯಾ ತಂಡಕ್ಕೆ ಪ್ರತಿರೋಧ ಒಡ್ಡಲಿಲ್ಲ.
ತಂಡದ ಮೊತ್ತ 24 ರನ್ ಗಳಾಗುವಷ್ಟರಲ್ಲಿಯೇ ಪಾಕಿಸ್ತಾನ ತನ್ನ ಆರಂಭಿಕ ಆಟಗಾರರಾದ ಅಹ್ಮದ್ ಶೆಹ್ಜಾದ್ (5 ರನ್ ) ಮತ್ತು ಸರ್ಫಾಜ್ ಅಹಮದ್ (10 ರನ್)ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಆಟಗಾರರಾದ ಹ್ಯಾರಿಸ್ ಸೊಹೈಲ್ (41 ರನ್), ನಾಯಕ ಮಿಸ್ ಬಾ ಉಲ್ ಹಕ್ (34 ರನ್) ಮತ್ತು ಸೊಹೇಬ್ ಮಕ್ಸೂದ್ (29 ರನ್) ಅವರು ಪಾಕಿಸ್ತಾನ ತಂಡಕ್ಕೆ ಚೇತರಿಕೆ ನೀಡುವ ಆಟದ ಪ್ರದರ್ಶನ ನೀಡಿದರಾದರೂ, ಇವರಿಗೆ ತಂಡದ ಇತರೇ ಆಟಗಾರರಿಂದ ಉತ್ತಮ ಸಾಥ್ ದೊರೆಯಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ 49.5 ಓವರ್ ಗಳಲ್ಲಿ ಕೇವಲ 213 ರನ್ ಗಳಿಗೇ ಆಲ್ ಔಟ್ ಆಯಿತು.
ಆಸ್ಟ್ರೇಲಿಯಾ ಪರ ಪ್ರಭಾವಿ ಬೌಲಿಂಗ್ ಮಾಡಿದ ಹೇಝಲ್ ವುಡ್ 4 ವಿಕೆಟ್ , ಸ್ಟಾರ್ಕ್ 2 ವಿಕೆಟ್, ಮ್ಯಾಕ್ಸ್ ವೆಲ್ 2 ವಿಕೆಟ್ ಮತ್ತು ಜಾನ್ಸನ್, ಫಾಲ್ಕನರ್ ತಲಾ 1 ವಿಕೆಟ್ ಕಬಳಿಸಿದರು. 10 ಓವರ್ ಗಳನ್ನು ಎಸೆದ ಹೇಝಲ್ ವುಡ್ ಕೇವಲ 35 ರನ್ ಗಳನ್ನು ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


