ಬಾಲ್ಯದ ಗೆಳತಿ ಪ್ರಿಯಾಂಕಾರನ್ನು ವರಿಸಲಿರುವ ಸುರೇಶ್ ರೈನಾ
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಸುರೇಶ್ ರೈನಾ ಮದುವೆ ಆಗಲಿರುವ ವಿಚಾರ ತಿಳಿದಿದ್ದೇ ಆದರೂ, ಅವರು ಯಾರನ್ನು ವರಿಸಲಿದ್ದಾರೆ...

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಸುರೇಶ್ ರೈನಾ ಮದುವೆ ಆಗಲಿರುವ ವಿಚಾರ ತಿಳಿದಿದ್ದೇ ಆದರೂ, ಅವರು ಯಾರನ್ನು ವರಿಸಲಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ.
ವಿಶ್ವಕಪ್‍ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ 28 ವರ್ಷದ ಸುರೇಶ್ ರೈನಾ ಟೂರ್ನಿ ಮುಗಿದ ಬಳಿಕ ಅಂದರೆ ಅದರ ಬೆನ್ನಲ್ಲೇ ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧರಿ ಅವರ ಜತೆ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಇದೇ ಮಾರ್ಚ್ 29 ರಂದು ವಿಶ್ವಕಪ್ ಪಂದ್ಯಾವಳಿ ಮುಗಿಯಲಿದ್ದು, ಏಪ್ರಿಲ್ 3ರಂದು ರೈನಾ ವಿವಾಹವಾಗಲಿದ್ದಾರೆ. ಮೂಲಗಳ ಪ್ರಕಾರ ಸುರೇಶ್ ರೈನಾ ಮತ್ತು ಪ್ರಿಯಾಂಕಾ ಅವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಏ.8ರಂದು ನವದೆಹಲಿಯ ಪಂಚತಾರಾ ಹೋಟೆಲ್‍ನಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಲಾಗಿದೆ. ಪ್ರಸ್ತುತ ಪ್ರಿಯಾಂಕಾ ಅವರು ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು, ನೆದರ್ ಲ್ಯಾಂಡ್ಸ್ ನಲ್ಲಿ ನೆಲೆಸಿದ್ದಾರೆ. ವಿವಾಹದ ಬಳಿಕ ಭಾರತದಲ್ಲೇ ನೆಲೆಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಮೀರತ್‍ನಲ್ಲಿರುವ ರೈನಾ ಹಾಗೂ ಪ್ರಿಯಾಂಕಾ ತಂದೆ-ತಾಯಂದಿರಿಬ್ಬರೂ ಆಪ್ತರಾಗಿರುವುದು ಇವರಿಬ್ಬರ ವಿವಾಹಕ್ಕೆ ಸ್ನೇಹ ಸೇತುವಾಗಿದೆ. 6 ತಿಂಗಳ ಹಿಂದೆ ಭೇಟಿಯಾಗಿದ್ದ ಈ ಎರಡೂ ಕುಟುಂಬ ಸದಸ್ಯರು ರೈನಾ-ಪ್ರಿಯಾಂಕಾ ಅವರ ವಿವಾಹಕ್ಕೆ ನಾಂದಿ ಹಾಡಿದ್ದಾರೆ.
ಇದಕ್ಕೂ ಮುನ್ನ ರೈನಾ, ನಟ ಕಮಲ್ ಹಾಸನ್ ಪುತ್ರಿ ಶ್ರುತಿಹಾಸನ್ ಹಾಗೂ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಪುತ್ರಿ ಪೂರ್ಣ ಪಟೇಲ್ ಜತೆ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈಗ ರೈನಾ ತಮ್ಮ ವಿರುದ್ಧ ಎಲ್ಲಾ ಗಾಸಿಪ್ ಗಳಿಗೆ ಶೀಘ್ರದಲ್ಲೇ ತೆರೆ ಎಳೆಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


