ವೀಕ್ಷಕರು ಅಂಪೈರ್ ಮಾತನ್ನೂ ಕೇಳಬಹುದು!
ಕ್ರಿಕೆಟ್ ಪಂದ್ಯಾವಳಿ ವೇಳೆ ಟಿವಿ ಅಂಪೈರ್ ಗಳ ಮಾತುಕತೆಗಳನ್ನು ವೀಕ್ಷಕರಿಗೆ ಕೇಳಿಸುವ ವಿನೂತನ ಪ್ರಯೋಗಕ್ಕೆ ಐಸಿಸಿ ಮುಂದಾಗಿದ್ದು..

ಸಿಡ್ನಿ: ಕ್ರಿಕೆಟ್ ಪಂದ್ಯಾವಳಿ ವೇಳೆ ಟಿವಿ ಅಂಪೈರ್ ಗಳ ಮಾತುಕತೆಗಳನ್ನು ವೀಕ್ಷಕರಿಗೆ ಕೇಳಿಸುವ ವಿನೂತನ ಪ್ರಯೋಗಕ್ಕೆ ಐಸಿಸಿ ಮುಂದಾಗಿದ್ದು, ಪ್ರಸ್ತುತ ವಿಶ್ವಕಪ್ ಪಂದ್ಯಾವಳಿಯ ನಾಕೌಟ್ ಹಂತದ ವೇಳೆ ಇದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಇಷ್ಟು ವರ್ಷಗಳ ಕಾಲ ತೃತೀಯ ಅಂಪೈರ್ ಹಾಗೂ ಮೈದಾನದ ಅಂಪೈರ್ ನಡುವಿನ ಮಾತುಕತೆ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಈ ಕುತೂಹಲವನ್ನು ತಣಿಸಲು ಐಸಿಸಿ ಮುಂದಾಗಿದೆ. ಅಂದರೆ, ವಿಶ್ವಕಪ್‍ನ ನಾಕೌಟ್ ಪಂದ್ಯಗಳ ವೇಳೆ ಟಿವಿ ಅಂಪೈರ್ ಹಾಗೂ ಮೈದಾನದ ಅಂಪೈರ್ ನಡುವಿನ ಸಂವಹನವನ್ನು ಪ್ರಸಾರ ಮಾಡಲು ಐಸಿಸಿ ನಿರ್ಧರಿಸಿದೆ. ಬುಧವಾರ ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಶ್ರೀಲಂಕಾ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಿಂದಲೇ ಇದು ಜಾರಿಗೆ ಬರಲಿದೆ.
ತೃತೀಯ ಅಂಪೈರ್ ಜತೆ ಆನ್‍ಫೀಲ್ಡ್ ಅಂಪೈರ್‍ಗಳು ನಡೆಸುವ ಮಾತುಕತೆಯ ಆಡಿಯೋ ಫೀಡ್ ಅನ್ನು ನೇರಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ನವೆಂಬರ್‍ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಇದನ್ನು ಪರೀಕ್ಷಾರ್ಥ ಜಾರಿ ಮಾಡಲಾಗಿತ್ತು. ಇದು ಯಶಸ್ಸು ಕಂಡ ಕಾರಣದಿಂದ ವಿಶ್ವಕಪ್‍ನ ಫೈನಲ್ ಪಂದ್ಯ ಸೇರಿದಂತೆ ಒಟ್ಟು 7 ನಾಕೌಟ್ ಪಂದ್ಯದಲ್ಲಿ ಅಂಪೈರ್ ಆಡಿಯೋ ಫೀಡ್ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


