ಕ್ರೀಡೆ

ರನ್ ಆಧಾರದ ಮೇಲೆ ರೋಹಿತ್ ಫಾರ್ಮ್ ಅಳೆಯಬೇಡಿ

ಪ್ರಸಕ್ತ ವಿಶ್ವಕಪ್‍ನಲ್ಲಿ ರನ್ ಬರ ಎದುರಿಸುತ್ತಿರುವ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ನಾಯಕ ಧೋನಿ ...

ರನ್ ಆಧಾರದ ಮೇಲೆ ರೋಹಿತ್  ಫಾರ್ಮ್  ಅಳೆಯಬೇಡಿ
ಧೋನಿ
Published On :

ಮೆಲ್ಬರ್ನ್: ಪ್ರಸಕ್ತ ವಿಶ್ವಕಪ್‍ನಲ್ಲಿ ರನ್ ಬರ ಎದುರಿಸುತ್ತಿರುವ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ  ಅವರ ಫಾರ್ಮ್  ಬಗ್ಗೆ ನಾಯಕ ಧೋನಿ ತಲೆ ಕೆಡಿಸಿಕೊಂಡಿಲ್ಲ. ರೋಹಿತ್ ಶರ್ಮಾ ಗಳಿಸಿರುವ ರನ್ ಆಧಾರದ ಮೇಲೆ ಅವರ ಫಾರ್ಮ್  ನಿರ್ಧರಿಸಬೇಡಿ ಎಂದು ತಿಳಿಸಿದ್ದಾರೆ. ಕಳೆದ ಆರು ಪಂದ್ಯಗಳಿಂದ ರೋಹಿತ್  ಶರ್ಮಾ  159 ರನ್ ದಾಖಲಿಸಿದ್ದಾರೆ. ಇದರಲ್ಲಿ ಕೇವಲ 2 ಅರ್ಧಶತಕಗಳಿವೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡು ದ್ವಿಶತಕ ದಾಖಲಿಸಿರುವ ಏಕೈಕ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿರುವ ರೋಹಿತ್ ಶರ್ಮಾ , ಪ್ರಸಕ್ತ ವಿಶ್ವಕಪ್‍ನಲ್ಲಿ ಉತ್ತಮ ಆರಂಭ ಪಡೆದಿದ್ದರೂ ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ಇದಾಗ್ಯೂ ತಂಡದ ನಾಯಕ ಧೋನಿ, ರೋಹಿತ್ ಬೆಂಬಲಕ್ಕೆ ನಿಂತಿದ್ದಾರೆ. ಈ ಟೂರ್ನಿಯಲ್ಲಿ ನಾವು ಹೆಚ್ಚು ಬಾರಿ ದೊಡ್ಡ ಗುರಿಯನ್ನು
ಬೆನ್ನಟ್ಟಿಲ್ಲ. ಅದರಲ್ಲೂ ಯುಎಇ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದವು. ಹಾಗಾಗಿ ಈ ಪಂದ್ಯಗಳಲ್ಲಿ ಆಟಗಾರರು ಹೆಚ್ಚು ರನ್ ಗಳಿಸುವ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಟ್ಸ್‍ಮನ್‍ಗಳು ಯಾವ
ರೀತಿಯ ಆರಂಭ ಪಡೆಯುತ್ತಾರೆ ಎಂಬುದು ಮುಖ್ಯ. ಹಾಗೆ ನೋಡುವುದಾದರೆ, ರೋಹಿತ್ ಉತ್ತಮವಾಗಿಯೇ  ಬ್ಯಾಟಿಂಗ್  ಮಾಡಿದ್ದಾರೆ.
ಆಟಗಾರರು ಅತ್ಯುತ್ತಮವಾಗಿ ಆಡಿದ್ದರೂ ಹೆಚ್ಚು ರನ್ ಗಳಿಸದೇ ಇರುವುದನ್ನು ನೋಡಿದ್ದೇವೆ. ಹಾಗಾಗಿ ರೋಹಿತ್  ಫಾರ್ಮ್ ಕಳೆದುಕೊಂಡಿದ್ದಾರೆ ಎಂದು
ಹೇಳುವುದು ಸರಿಯಲ್ಲ. ಪಂದ್ಯದಲ್ಲಿ ಕ್ರೀಸ್‍ನಲ್ಲಿ ನಿಂತು ಆಡುವುದು ಪ್ರಮುಖ. ಇದನ್ನು ರೋಹಿತ್ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಧೋನಿ
ಸ್ಪಷ್ಟನೆ ನೀಡಿದ್ದಾರೆ. ಕಷ್ಟದ ಪಂದ್ಯಗಳನ್ನು ಆಡಿದಾಗ ನಾವು ಹೆಚ್ಚು ಪಾಠ ಕಲಿಯುತ್ತೇವೆ. ಹಾಗಾಗಿ ಕಠಿಣ ಸವಾಲಿನ ಪಂದ್ಯಗಳಲ್ಲಿನ ಪ್ರದರ್ಶನವನ್ನು ನಿರಾಕರಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.