ಕ್ರೀಡೆ

ಯುಎಇ ವಿರುದ್ಧ ಗೆದ್ದ ವಿಂಡೀಸ್: ಕ್ವಾಟರ್‌ಫೈನಲ್ ಆಸೆ ಜೀವಂತ

ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಯುಎಇ ವಿರುದ್ಧ ವೆಸ್ಟ್ ಇಂಡೀಸ್ 6 ವಿಕೆಟ್‌ಗಳಿಂದ ಜಯ ಗಳಿಸಿದ್ದು, ಕ್ವಾಟರ್‌ಫೈನಲ್ ಆಸೆ ಜೀವಂತವಾಗಿಸಿಕೊಂಡಿದೆ.

ಯುಎಇ ವಿರುದ್ಧ ಗೆದ್ದ ವಿಂಡೀಸ್: ಕ್ವಾಟರ್‌ಫೈನಲ್ ಆಸೆ ಜೀವಂತ
ವೆಸ್ಟ್‌ ಇಂಡೀಸ್‌
Published On :

ನೇಪಿಯರ್: ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಯುಎಇ ವಿರುದ್ಧ ವೆಸ್ಟ್ ಇಂಡೀಸ್ 6 ವಿಕೆಟ್‌ಗಳಿಂದ ಜಯ ಗಳಿಸಿದ್ದು, ಕ್ವಾಟರ್‌ಫೈನಲ್ ಆಸೆ ಜೀವಂತವಾಗಿಸಿಕೊಂಡಿದೆ.

ನಾಯಕ ಜಾಸನ್ ಹೋಲ್ಡರ್ ಅವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಯುಎಇ 175 ರನ್ ಗಳಿಗೆ ಆಲೌಟಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್‌ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.

ಟಾಸ್‌ ಗೆದ್ದ ವೆಸ್ಟ್‌ಇಂಡೀಸ್‌ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 47.4 ಓವರ್‌ಗಳಲ್ಲಿ 175 ರನ್‌ಗಳಿಗೆ ಆಲೌಟಾಯಿತು.

ಜಾಸನ್‌ ಹೋಲ್ಡರ್‌ ಅವರ ಬೌಲಿಂಗ್ ದಾಳಿಗೆ ಯುಎಇ 46 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.  ಆರಂಭಿಕ ಆಘಾತದಿಂದ ಅಲ್ಪ ಚೇತರಿಸಿಕೊಳ್ಳಲು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಅಮ್ಜದ್‌ ಜಾವೆದ್ (56), ಮತ್ತು ನಾಸಿರ್‌ ಅಜೀಜ್‌ (60) ಅವರ ಜೊತೆಯಾಟದಿಂದ ಯುಎಇ 150ರ ಗಡಿ ದಾಟಿತು.

ವೆಸ್ಟ್‌ಇಂಡೀಸ್‌ ಪರ ಜಾಸನ್‌ ಹೋಲ್ಡರ್‌ 4 ವಿಕೆಟ್‌ , ಇವರಿಗೆ ಉತ್ತಮ ಬೆಂಬಲ ನೀಡಿದ ಜೆರೊಮ್‌ ಟೇಲರ್‌ 3 ರಸೆಲ್‌ 2 ವಿಕೆಟ್ ಕಬಳಿಸಿದರು.

176 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ 4 ವಿಕೆಟ್‌ ನಷ್ಟಕ್ಕೆ 30.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಜಾಸನ್‌ ಚಾರ್ಲ್ಸ್‌ (55) ಹಾಗೂ ಜೊನಾಥನ್‌ ಕಾರ್ಟರ್‌ (50) ಅರ್ಧಶತಕ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.