ಕ್ರೀಡೆ

ಭಾರತ-ಜಿಂಬಾಬ್ವೆ ಹಣಾಹಣಿ: ಗೆಲುವಿನತ್ತ ಟೀಂ ಇಂಡಿಯಾ

ಜಿಂಬಾಬ್ವೆ ನೀಡಿದ 288 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದ್ದು, ಇದೀಗ ಗೆಲುವಿನತ್ತ ಮುಖ ಮಾಡಿದೆ.

ಭಾರತ-ಜಿಂಬಾಬ್ವೆ ಹಣಾಹಣಿ: ಗೆಲುವಿನತ್ತ ಟೀಂ ಇಂಡಿಯಾ
ಜಿಂಬಾಬ್ವೆ
Published On :

ಈಡನ್ ಪಾರ್ಕ್(ಆಕ್ಲೆಂಡ್): ಜಿಂಬಾಬ್ವೆ ನೀಡಿದ 288 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದ್ದು, ಇದೀಗ ಗೆಲುವಿನತ್ತ ಮುಖ ಮಾಡಿದೆ.

ಸುರೇಶ್ ರೈನಾ ಹಾಗೂ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಮಯೋಜಿತ ಆಟ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದೆ.

45 ಓವರ್ ಗೆ ಭಾರತ 4 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ. ರೈನಾ ಆಕರ್ಷಕ ಶತಕ ಸಿಡಿಸಿ ಬ್ಯಾಟ್ ಮಾಡುತ್ತಿದ್ದಾರೆ. ನಾಯಕನ ಆಟ ಪ್ರದರ್ಶಿಸಿದ ಧೋನಿ ಅರ್ಧ ಶತಕ ಗಳಿಸಿದ್ದಾರೆ.

ಆರಂಭಿಕರಾದ ಶಿಖರ್ ಧವನ್ ಕೇವಲ 4 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 16 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಬಳಿಕ ಬಂದ ಅಜಿಂಕ್ಯಾ ರಹಾನೆ 19 ರನ್ ಗಳಿಸಿದ್ದಾಗ ಸಿಂಗಲ್ ರನ್ ಕದಿಯಲು ಹೋಗಿ ರನ್ ಔಟಾದರು. ಸದ್ಯ ವಿರಾಟ್ ಕೊಹ್ಲಿ ಅಜೇಯ 27 ರನ್ ಗಳಿಸಿ ಆಟವಾಡುತ್ತಿದ್ದಾರೆ. ಕೊಹ್ಲಿಗೆ ಸುರೇಶ್ ರೈನಾ ಸಾಥ್ ನೀಡುತ್ತಿದ್ದಾರೆ. ಭಾರತ 19 ಓವರ್ ಗಳಿಗೆ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ.

ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದಾಗಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾಗಿ ಬಂದ ಚಮ್ಮು ಚಿಬಾಬಾ 7 ಗಳಿಸಿದರೆ, ಹಮಿಲ್ಟನ್ 2 ರನ್ ಗಳಿಸಿ ಔಟಾದರು. ನಂತರ ಬಂದ ಸೋಲೊಮನ್ ಮೀರೆ ಸಹ 9 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಔಟಾದರು.

ಈ ವೇಳೆ ಜತೆಯಾದ ಸಿನ್ ವಿಲಿಯಮ್ಸ್ ಹಾಗೂ ಟೇಲರ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಸುಸ್ಥಿತಿಯತ್ತ ಮುನ್ನಡಿಸಿದರು. ಸಿನ್ ವಿಲಿಯಮ್ಸ್ 50 ರನ್ ಗಳಿಸಿದರೆ ಸ್ಫೋಟಕ ಆಟವಾಡಿದ ಟೇಲರ್ ಶತಕ ಸಿಡಿಸಿದರು. 110 ಎಸೆತಗಳನ್ನು ಎದುರಿಸಿದ ಟೇಲರ್ ಭರ್ಜರಿ 138 ರನ್ ಗಳಿಸಿದರು. ಇರ್ವಿನ್ 27, ರಾಝ 28, ಚಕಾಬ್ವೆ 10, ಪನ್ಯಾಂಗರ 6, ಚಾಟರ ಶೂನ್ಯ ಗಳಿಸಿದರೆ ಮುಪರೀವ ಅಜೇಯ 1 ರನ್ ಗಳಿಸಿದ್ದಾರೆ.

ಭಾರತ ಪರ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮಾ ತಲಾ 3 ವಿಕೆಟ್ ಗಳಿಸಿದರೆ, ಆರ್. ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.