ಆಂಗ್ಲರಿಗೆ ಗೆಲವಿನ ಅಂತ್ಯ
ಕ್ರಿಕೆಟ್ ಜನಕ ಇಂಗ್ಲೆಂಡ್ ಪಡೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕಡೇಯ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಹೋರಾಟ...

ಸಿಡ್ನಿ: ಕ್ರಿಕೆಟ್ ಜನಕ ಇಂಗ್ಲೆಂಡ್ ಪಡೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕಡೇಯ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಹೋರಾಟ ಅಂತ್ಯಗೊಳಿಸಿದೆ. ಈ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದ ಇಂಗ್ಲೆಂಡ್ ತಂಡಕ್ಕೆ ಎ ಗುಂಪಿನ ತನ್ನ ಅಂತಿಮ ಪಂದ್ಯಗೆದ್ದು ಗೌರವ ಉಳಿಸಿಕೊಳ್ಳಲು ಇದ್ದ ಕಡೇಯ ಅವಕಾಶವಾಗಿತ್ತು. ಈ ಪಂದ್ಯದಲ್ಲಿ ಆಂಗ್ಲರ್ ಪಡೆ ದುರ್ಬಲ ಅಫ್ಘಾನಿಸ್ತಾನ ವಿರುದ್ಧ 9 ವಿಕೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದೆ. ಈ ಮೂಲಕ ಜಯ ದೊಂದಿಗೆ ವಿಶ್ವಕಪ್‍ಗೆ ಗುಡ್ ಬೈ ಹೇಳಿದೆ.
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಓವರ್ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾ ಡಿಕೊಂಡಿತು. ಅಫ್ಘಾನಿಸ್ತಾನ 36.2 ಓವರ್‍ಗಳಿಗೆ 7 ವಿಕೆಟ್ ಕಳೆದುಕೊಂಡು 111ರನ್ ದಾಖಲಿಸಿತ್ತು. ಈ ಮೊತ್ತವನ್ನು ಇಂಗ್ಲೆಂಡ್ ಬೆನ್ನಟ್ಟಿದ ನಂತರ ಮತ್ತೆ ಮಳೆ ಅಡ್ಡಿಪಡಿಸಿದಾಗ ಓವರ್ ಸಂಖ್ಯೆಯನ್ನು 25ಕ್ಕೆ ಇಳಿಸಲಾಯಿತು. ಅಲ್ಲದೆ ಡಕ್ವರ್ತ್ ಲೂಯಿಸ್ ಸ್ಟೆರ್ನ್ ನಿಯಮದ ಪ್ರಕಾರ ಇಂಗ್ಲೆಂಡ್‍ಗೆ 101 ರನ್ ಗುರಿ ನೀಡಲಾಯಿತು. ನಂತರ ಆಂಗ್ಲರು 1 ವಿಕೆಟ್‍ಗೆ 101 ರನ್ ಪೇರಿಸಿ ಗೆಲವಿನ ದಡ ಸೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


