ಪ್ರಣಯ್ ಗೆ ಸಿಹಿ, ಕಶ್ಯಪ್, ಶ್ರೀಕಾಂತ್‍ಗೆ ಕಹಿ
ಭಾರತದ ಮತ್ತೊಬ್ಬ ಆಟಗಾರ ಎಚ್.ಎಸ್. ಪ್ರಣಯ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ...

ಭಾರತದ ಮತ್ತೊಬ್ಬ ಆಟಗಾರ ಎಚ್.ಎಸ್. ಪ್ರಣಯ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ಫ್ರಾನ್ಸ್ ನ ಬ್ರೈಸ್ ಲೆವೆಂಡೆಸ್ ವಿರುದ್ಧ 16-21, 21-8, 21-18 ಸೆಟ್‍ಗಳಲ್ಲಿ ಜಯ ಸಾಧಿಸಿ, ಮುನ್ನಡೆ ಪಡೆದರು. 2ನೇ ಸುತ್ತಿನಲ್ಲಿ ಅವರು, ಇಂಗ್ಲೆಂಡ್‍ನ ರಾಜೀವ್ ಔಸೆಫ್ ವಿರುದ್ಧ ಸೆಣಸಲಿದ್ದಾರೆ.
ಶ್ರೀಕಾಂತ್, ಕಶ್ಯಪ್‍ಗೆ ಸೋಲಿನ ಕಹಿ
ವಿಶ್ವದ 5ನೇ ಶ್ರೇಯಾಂಕಿತ ಕೆ. ಶ್ರೀಕಾಂತ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲಿನ ಕಹಿ ಅನುಭವಿಸಿದ್ದಾರೆ. ವಿಶ್ವದ 14ನೇ ಶ್ರೇಯಾಂಕಿತ ಆಟಗಾರ ಜಪಾನಿನ ಕೆಂಟೋ ಮೆಮೊಟಾ 21-18, 12-21, 21-15 ಅಂಕಗಳಿಂದ ಶ್ರೀಕಾಂತ್‍ಗೆ ಸೋಲುಣಿಸಿದರು.
ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 12ನೇ ಶ್ರೇಯಾಂಕಿತ ಪರುಪಳ್ಳಿ ಕಶ್ಯಪ್, 13-21, 12-21 ನೇರ ಅಂಕಗಳಿಂದ 6ನೇ ಶ್ರೇಯಾಂಕಿತ ಚೈನೀಸ್ ತೈಪೇನ ಚೊವು ಟಿಯನ್ ಚೆನ್ ವಿರುದ್ಧ ಪರಾಜಯ ಅನುಭವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


