ಭಾರತದಲ್ಲಿ ಹೋಳಿ ಆಚರಣೆ, ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆ: ಸಾಮಿ
ಶುಕ್ರವಾರ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಬಹುದು ಆದರೆ ನಾವು ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆಯನ್ನು ಆಚರಿಸುತ್ತೇವೆ..

ಪರ್ತ್: ಶುಕ್ರವಾರ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಬಹುದು ಆದರೆ ನಾವು ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆಯನ್ನು ಆಚರಿಸುತ್ತೇವೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ಡರೆನ್ ಸಾಮಿ ಹೇಳಿದ್ದಾರೆ.
ಇದೇ ಶುಕ್ರವಾರ ಪರ್ತ್ ನ ವಾಕಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ಕ್ರಿಕೆಟ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಸಾಕಷ್ಟು ಉತ್ಸಕತೆ ಮನೆ ಮಾಡಿದೆ. ಈ ನಡುವೆ ವಿಂಡೀಸ್ ಆಟಗಾರ ಡರೇನ್ ಸಾಮಿ ಅವರ ಹೇಳಿಕೆ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಭಾರತದ ವಿರುದ್ಧ ವಿಂಡೀಸ್ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಸಾಮಿ ವಿಶ್ವಾಸದಿಂದ ಹೇಳಿದ್ದಾರೆ.
ಪರ್ತ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡರೇನಾ ಸಾಮಿ, ಮುಂಬರುವ ಭಾರತದ ವಿರುದ್ಧದ ಪಂದ್ಯದಲ್ಲಿ ನಾವು ಗೆಲ್ಲುತ್ತೇವೆ. ಆದರೆ ಭಾರತ ಒಂದು ಉತ್ತಮ ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಆ ತಂಡ ಉತ್ತಮ ಫಾರ್ಮ್ ನಲ್ಲಿದ್ದು, ನಾವು ಕೂಡ ಅಂತಹುದೇ ಉತ್ತಮ ಆಟವನ್ನು ಪ್ರದರ್ಶಿಸಿದರೆ ಗೆದ್ದೇ ಗೆಲ್ಲುತ್ತೇವೆ ಎಂದು ಸಾಮಿ ಹೇಳಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯದ ಸೋಲಿನ ಕುರಿತು ಮಾತನಾಡಿದ ಸಾಮಿ, ಖಂಡಿತ ತಂಡದಲ್ಲಿ ಹಿರಿಯರ ಅನುಭವದ ಕೊರತೆ ಇದೆ. ಆದರೂ ಯುವ ನಾಯಕ ಜೇಸನ್ ಹೋಲ್ಡರ್ ಉತ್ತಮವಾಗಿ ತಂಡವನ್ನು ನಿಭಾಯಿಸುತ್ತಿದ್ದಾರೆ ಎಂದು ಸಾಮಿ ಹೇಳಿದರು.
ಒಟ್ಟಾರೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದ ರೋಚಕತೆ ಹೆಈಗಾಗಲೇ ಐಪಿಎಲ್ ನಲ್ಲಿ ಕೂಡಿ ಆಡಿರುವ ಈ ಎರಡೂ ತಂಡದ ಆಟಗಾರರಿಗೆ ಪರಸ್ಪರರ ದೌರ್ಬಲ್ಯ ತಿಳಿದಿದ್ದು, ಇದೇ ಮುಂದಿನ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


