ದ್ರಾವಿಡ್, ಕೊಹ್ಲಿ ಮತ್ತು ಧೋನಿಯ ಸ್ವಭಾವ ಮೈಗೂಡಿಸಿಕೊಳ್ಳುವೆ: ರೆಹಾನೆ
ಜಿಂಬಾಬ್ವೆ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಸ್ಥಾನ ವಹಿಸಿರುವ ಅಜಿಂಕ್ಯ ರೆಹಾನೆ ತಾನು ಮಹೇಂದ್ರ ಸಿಂಗ್ ಧೋನಿಯ ತಾಳ್ಮೆ...

ಮುಂಬೈ: ಜಿಂಬಾಬ್ವೆ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಸ್ಥಾನ ವಹಿಸಿರುವ ಅಜಿಂಕ್ಯ ರೆಹಾನೆ ತಾನು ಮಹೇಂದ್ರ ಸಿಂಗ್ ಧೋನಿಯ ತಾಳ್ಮೆ, ವಿರಾಟ್ ಕೊಹ್ಲಿಯ ನಿಯಂತ್ರಿತ ಆಕ್ರಮಣಕಾರಿ ಶೈಲಿ ಹಾಗೂ ರಾಹುಲ್ ದ್ರಾವಿಡ್‌ನ ಸರಳತೆಯನ್ನು ಅನುಸರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಧೋನಿಯ ನೇತೃತ್ವದಲ್ಲಿ ಆಡುವಾಗ ನಾನು ಅವರು ಹೇಗೆ ಅಷ್ಟೊಂದು ತಾಳ್ಮೆಯಿಂದ ಇರುತ್ತಾರೆ ಎಂಬುದನ್ನು ಗಮನಿಸುತ್ತಿದೆ. ಅವರ ಈ ತಾಳ್ಮೆ ಸ್ವಭಾವವನ್ನು ನಾನು ಮೈಗೂಡಿಸಿಕೊಳ್ಳಬೇಕು. ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಗಾರ, ಅವರು ತಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳುವ ರೀತಿಯನ್ನು ನಾನು ಕಲಿಯಬೇಕಿದೆ. ಇನ್ನು ರಾಹುಲ್ ಭಾಯಿ (ರಾಹುಲ್ ದ್ರಾವಿಡ್) ಅವರು ತುಂಬಾ ಸರಳ. ಅವರ ವ್ಯಕ್ತಿತ್ವವನ್ನು ನಾನು ಮೈಗೂಡಿಸಿಕೊಳ್ಳಬೇಕು. ಹೀಗೆ ಈ ಮೂವರು ನಾಯಕರ ಸ್ವಭಾವವನ್ನು ನಾನು ಅನುಸರಿಸಬೇಕು ಎಂದಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೆಹಾನೆ ಹೇಳಿದ್ದಾರೆ.
ನನಗೆ ನನ್ನದೇ ಆದ ಕೆಲವು ಐಡಿಯಾಗಳಿವೆ. ಅದನ್ನು ನಾನು ಫೀಲ್ಡ್‌ನಲ್ಲಿ ಅನುಷ್ಠಾನ ಮಾಡಬೇಕಿದೆ. ನನ್ನ ಸಹಾಯಕ್ಕಾಗಿ ಹಲವರಿದ್ದಾರೆ, ಮಾತ್ರವಲ್ಲ ಪದೇ ಪದೇ ಸಲಹೆ ಕೇಳಿಕೊಂಡಿರುವುದಕ್ಕೆ ನನ್ನಿಂದ ಸಾಧ್ಯವಾಗಲ್ಲ.
ನನಗೆ ಈ ಜವಾಬ್ದಾರಿಯನ್ನು ನೀಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಅದೇ ವೇಳೆ ಹೊಸ ಜವಾಬ್ದಾರಿ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿದೆ ಎಂದು ರೆಹಾನೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


