ಕ್ರೀಡೆ

ಅಜಿಂಕ್ಯ ರೆಹಾನೆಗೆ ಶುಭ ಕೋರಿದ ಸಚಿನ್

ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್‍ಗಳ ಕ್ರಿಕೆಟ್ ಸರಣಿಗೆ ಭಾರತ ತಂಡದ ನಾಯಕನಾಗಿ ಆಯ್ಕೆಗಿರುವ ಅಜಿಂಕ್ಯ ರಹಾನೆಗೆ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್...

ಅಜಿಂಕ್ಯ ರೆಹಾನೆಗೆ ಶುಭ ಕೋರಿದ ಸಚಿನ್
ಸಚಿನ್ ತೆಂಡೂಲ್ಕರ್ ಮತ್ತು ಅಜಿಂಕ್ಯ ರಹಾನೆ (ಕೃಪೆ :ಪಿಟಿಐ)
Published On :

ಮುಂಬೈ: ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್‍ಗಳ ಕ್ರಿಕೆಟ್ ಸರಣಿಗೆ ಭಾರತ ತಂಡದ ನಾಯಕನಾಗಿ ಆಯ್ಕೆಗಿರುವ ಅಜಿಂಕ್ಯ ರಹಾನೆಗೆ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಶುಭ ಕೋರಿದ್ದಾರೆ. ``ಅಜಿಂಕ್ಯ ರಹಾನೆ ಅವರ ಆಯ್ಕೆ ನನ್ನಲ್ಲಿ ಸಂತಸ ತಂದಿದೆ. ಆತ ಒಬ್ಬ ಪ್ರಾಮಾಣಿಕ ಹಾಗೂ ಶ್ರಮಕಾರಿ ಕ್ರಿಕೆಟಿಗ. ಆಟದ ಮೇಲಿನ ಪ್ರೀತಿ ಹಾಗೂ ಬದಟಛಿತೆಯ ವಿಷಯದಲ್ಲಿ ಅವರು ನನ್ನನ್ನು ಸಾಕಷ್ಟು ಪ್ರಭಾವಿಸಿದ್ದಾರೆ. ಅವರು ನಿಸ್ಸಂಶಯವಾಗಿ ತಮ್ಮ ಮೇಲಿನ ಜವಾಬ್ದಾರಿಯನ್ನು ಯಶಸ್ವಿಯುತವಾಗಿ ನೆರವೇರಿಸುತ್ತಾರೆ ಎಂಬ ನಂಬಿಕೆ ಇದೆ. ಜಿಂಬಾಬ್ವೆ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅವರಿಗೆ ನಾನು ಹೃತ್ಪೂರ್ವಕವಾಗಿ ಅಬಿsನಂದನೆ ಸಲ್ಲಿಸುತ್ತೇನೆ'' ಎಂದು ಸಚಿನ್ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ ವರದಿ ತಿಳಿಸಿದೆ. 27 ವರ್ಷದ ಅಜಿಂಕ್ಯ ರಹಾನೆ ಮೂಲತಃ ಮುಂಬೈನವರಾಗಿದ್ದು, 15 ವರ್ಷಗಳ ನಂತರ ಭಾರತ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಮುಂಬೈ ಕ್ರಿಕೆಟಿಗ ಎನಿಸಿದ್ದಾರೆ. ಸೋಮವಾರವಷ್ಟೇ ಭಾರತೀಯ ಆಯ್ಕೆ ಸಮಿತಿ ಜಿಂಬಾಬ್ವೆ ವಿರುದ್ಧದ ಏಕದಿನ ಹಾಗೂ ಟಿ-20 ಪಂದ್ಯ ಸರಣಿಗೆ ಅವರನ್ನು ನಾಯಕನನ್ನಾಗಿ ನೇಮಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.