ಕ್ರೀಡೆ

ವಿಂಬಲ್ಡನ್ ಟೆನಿಸ್ ಟೂರ್ನಿ: ಜೊಕೊವಿಕ್ ಗೆ ಫಿಲಿಪ್ ಎದುರಾಳಿ

ವರ್ಷದ ಮೂರನೇ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಟೆನಿಸ್ ನ ಘಟಾನು ಘಟಿಗಳು ಪ್ರಶಸ್ತಿ ಪಡೆಯಲು ಕಣಕ್ಕಿಳಿಯುತ್ತಿದ್ದಾರೆ.

ವಿಂಬಲ್ಡನ್ ಟೆನಿಸ್ ಟೂರ್ನಿ: ಜೊಕೊವಿಕ್ ಗೆ ಫಿಲಿಪ್ ಎದುರಾಳಿ
ಟೆನಿಸ್ ಟೂರ್ನಿ ಪಂದ್ಯಾವಳಿ(ಸಾಂದರ್ಭಿಕ ಚಿತ್ರ)
Published On :

ಲಂಡನ್: ವರ್ಷದ ಮೂರನೇ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಟೆನಿಸ್ ನ ಘಟಾನುಘಟಿಗಳು ಪ್ರಶಸ್ತಿ ಪಡೆಯಲು ಕಣಕ್ಕಿಳಿಯುತ್ತಿದ್ದಾರೆ. ಟೂರ್ನಿಯ ಆರಂಭಿಕ ದಿನದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಸೆಣಸಲಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಜೂ.29 ರಿಂದ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಫಿಲಿಪ್ ಕೊಲ್ಸ್ ಚೈಬರ್ ವಿರುದ್ಧ ಜೊಕೊವಿಕ್ ಸೆಣಸಲಿದ್ದಾರೆ. 5 :30 ಕ್ಕೆ ಪ್ರಾರಂಭವಾಗಲಿದೆ  ರಾತ್ರಿ 9 :30 ಕ್ಕೆ ಪ್ರಾರಂಭವಾಗಲಿರುವ ಪಂದ್ಯದಲ್ಲಿ ಲೆಯ್ಟನ್ ಹೆವಿಟ್- ಫಿನ್ ಜಾರ್ಕೊ ನೈಮನೆನ್ ಸೆಣಸಲಿದ್ದಾರೆ. ಈ ಪಂದ್ಯ ಸಂಜೆ 6 ಕ್ಕೆ ಆರಂಭವಾಗಲಿದೆ. ಲೆನಾರ್ಡೊ ಮೇಯರ್, ತಮ್ಮ ಪ್ರತಿಸ್ಪರ್ಧಿ ಕೊಕ್ಕಿನಾಕಿಸ್ ವಿರುದ್ಧ ಆಡಲಿದ್ದು, ಸಂಜೆ 4 ಕ್ಕೆ ಪ್ರಾರಂಭವಾಗಲಿದೆ. ಜಪಾನ್ ನ ಕಾಯ್ ನಿಶಿಕೋರಿ, ಸೈಮನ್ ಬೊಲ್ಲೇಲ್ಲಿ ವಿರುದ್ಧ ಆಡಲಿರುವ ಪಂದ್ಯ ಸಂಜೆ 7 ಕ್ಕೆ ಪ್ರಾರಂಭವಾಗಲಿದೆ.

ಫೆರರ್ ಔಟ್: ಮೊಣಕೈ ಗಾಯದ ಸಮಸ್ಯೆಗೆ ಸಿಲುಕಿರುವ ಎಂಟನೇ ಶ್ರೇಯಾಂಕಿತ ಆಟಗಾರ ಡೇವಿಡ್ ಫೆರರ್ ವಿಂಬಲ್ಡನ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.