ಶಕೀಬ್‍ಗೆ ಮತ್ತೆ ಅಗ್ರಸ್ಥಾನ
ಬಾಂಗ್ಲಾದೇಶದ ಪ್ರತಿಭಾನ್ವಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯ ಆಲ್‍ರೌಂಡ್ ಆಟಗಾರರಲ್ಲಿ ಮತ್ತೊಮ್ಮೆ ಅಗ್ರಮೇವ ಸ್ಥಾನ ಪಡೆದಿದ್ದಾರೆ.

ಢಾಕಾ: ಬಾಂಗ್ಲಾದೇಶದ ಪ್ರತಿಭಾನ್ವಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯ ಆಲ್‍ರೌಂಡ್ ಆಟಗಾರರಲ್ಲಿ ಮತ್ತೊಮ್ಮೆ ಅಗ್ರಮೇವ ಸ್ಥಾನ ಪಡೆದಿದ್ದಾರೆ.
ಇತ್ತೀಚಿನ ಐಸಿಸಿ ರ್ಯಾಂಕಿಂಗ್ ಪಟ್ಟಿಯ ಅಂಕಿಅಂಶಗಳಂತೆ ಶಕೀಬ್ ಮೂರೂ ಪ್ರಕಾರದ ಕ್ರಿಕೆಟ್ ಮಾದರಿಯಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಭಾರತ ವಿರುದ್ಧದ ಸರಣಿಯ ನಂತರ ಬಿಡುಗಡೆಯಾಗಿರುವ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಶಕೀಬ್ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ (404) ಅವರನ್ನು ಹಿಂದಿಕ್ಕಿ ಒಟ್ಟಾರೆ 408 ಪಾಯಿಂಟ್ಸ್ ಗಳನ್ನು ಕಲೆಹಾಕಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ.
ಮೂರನೇ ಸ್ಥಾನವನ್ನು ಶ್ರೀಲಂಕಾದ ಮತ್ತೋರ್ವ ಆಲ್‍ರೌಂಡರ್ ಆ್ಯಂಜೆಲೊ ಮ್ಯೂಥ್ಯೂಸ್ (308) ಅಲಂಕರಿಸಿದ್ದಾರೆ ಎಂದು ಸ್ಪೋಟ್ರ್ಸ್ ಕೀಡಾ ವರದಿ ಮಾಡಿದೆ. ಅಂದ್ಹಾಗೆ ಭಾರತ ವಿರುದ್ಧದ ಸರಣಿಯಲ್ಲಿ ಶಕೀಬ್ ಮೂರು ಪಂದ್ಯಗಳಿಂದ 61.50ರ ಸರಾಸರಿಯಲ್ಲಿ 123 ರನ್ ಗಳಿಸಿದ್ದಲ್ಲದೆ, 99 ರನ್‍ಗಳನ್ನಿತ್ತು 3 ವಿಕೆಟ್ ಪಡೆದಿದ್ದರು. ಬಾಂಗ್ಲಾದ ಐತಿಹಾಸಿಕ 2-1ರ ಸರಣಿ ಗೆಲುವಿನಲ್ಲಿ ಶಕೀಬ್ ಕೊಡುಗೆ ಕೂಡ ಮುಖ್ಯವೆನಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


