ಧೋನಿಯ ತಪ್ಪು ನಿರ್ಧಾರಗಳೇ ಬಾಂಗ್ಲಾ ವಿರುದ್ಧ ಸರಣಿ ಸೋಲಿಗೆ ಕಾರಣ: ಕೊಹ್ಲಿ
ಭಾರತ ಕಳಪೆ ಪ್ರದರ್ಶನ ಮೂಲಕ ಬಾಂಗ್ಲಾದೇಶ ವಿರುದ್ಧ ಸರಣಿ ಸೋತಿದ್ದು, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಪ್ಪು...

ಮೀರ್ ಪುರ್: ಭಾರತ ಕಳಪೆ ಪ್ರದರ್ಶನ ಮೂಲಕ ಬಾಂಗ್ಲಾದೇಶ ವಿರುದ್ಧ ಸರಣಿ ಸೋತಿದ್ದು, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಪ್ಪು ನಿರ್ಧಾರಗಳೇ ಭಾರತದ ಮೊದಲೆರಡು ಪಂದ್ಯಗಳ ಸೋಲಿಗೆ ಕಾರಣ ಎಂದು ಉಪ ನಾಯಕ ವಿರಾಟ್ ಕೊಹ್ಲಿ ಬಹಿರಂಗವಾಗಿ ಧೋನಿ ವಿರುದ್ಧ ಗುಡುಗಿದ್ದಾರೆ.
ಆದರೆ ಧೋನಿ ತಪ್ಪು ನಿರ್ಧಾರಗಳ ಕುರಿತಾಗಿ ಆಟಗಾರರರು ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಟೀಮ್ ಇಂಡಿಯಾ ಸೋಲುಗಳಿಗೆ ನಾನೇ ಬೇಕಾದರೆ ನಾಯಕತ್ವ ತೊರೆಯಲು ನಾನು ಸಿದ್ಧ ಎಂದು ಧೋನಿ ಹೇಳಿಕೆ ನೀಡಿದ್ದರು. ನಂತರ ಆರ್. ಅಶ್ವಿನ್, ಸುರೇಶ್ ರೈನಾ ಧೋನಿಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಆದರೆ ಕೊಹ್ಲಿ ಮಾತ್ರ ಧೋನಿಯ ವಿರುದ್ಧ ಬೊಟ್ಟು ಮಾಡಿರುವುದು ಹೊಸ ಚರ್ಚೆಗೆ ದಾರಿ ಮಾಡಿದ್ದಾರೆ.
ಖಾಸಗಿ ಚಾನಲ್ ವೊಂದಕ್ಕೆ ಸಂದರ್ಶನ ನೀಡಿರುವ ಕೊಹ್ಲಿ, ಕಳೆದೆರಡು ಪಂದ್ಯಗಳಲ್ಲಿ ನಾವು ಮಾಡಿದ ನಿರ್ಧಾರಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಮೈದಾನದಲ್ಲಿ ಇದು ಎದ್ದು ಕಾಣುತ್ತಿತ್ತು. ಆಟಗಾರರು ಸಂಪೂರ್ಣ ಮುಕ್ತವಾಗಿ ಆಡುತ್ತಿಲ್ಲ ಎಂಬುದು ಕ್ರಿಕೆಟ್ ವೀಕ್ಷಕರು ಮತ್ತು ತಜ್ಙರಿಗೆ ಅರ್ಥವಾಗುತ್ತಿತ್ತು. ಮೊದಲೆರಡು ಪಂದ್ಯಗಳಲ್ಲಿ ನಮ್ಮ ಕೆಟ್ಟ ಪ್ರದರ್ಶನ, ತಪ್ಪುಗಳಿಗೆ ಸ್ಪಷ್ಟತೆಯ ಕೊರತೆ ಕಾರಣ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


