ಟಿಟಿ: ಜಪಾನ್‍ನತ್ತ ಭಾರತ
ಬುಧವಾರದಿಂದ ಜಪಾನ್‍ನ ಕೊಬೆಯಲ್ಲಿ ಶುರುವಾಗಲಿರುವ ಜಿಎಸಿ ಗ್ರೂಪ್ ವಲ್ರ್ಡ್ ಟೂರ್ ಜಪಾನ್ ಓಪನ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ನಾಲ್ವರು...

ನವದೆಹಲಿ: ಬುಧವಾರದಿಂದ ಜಪಾನ್‍ನ ಕೊಬೆಯಲ್ಲಿ ಶುರುವಾಗಲಿರುವ ಜಿಎಸಿ ಗ್ರೂಪ್ ವಲ್ರ್ಡ್ ಟೂರ್ ಜಪಾನ್ ಓಪನ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ನಾಲ್ವರು ಆಟಗಾರರಿರುವ ಭಾರತ ತಂಡ ಇಂದು ಅತಿಮುಂಜಾನೆ ಜಪಾನ್‍ಗೆ ಪ್ರಯಾಣ ಬೆಳೆಸಿತು.
ದೇಶದ ಪ್ರಮುಖ ಟೇಬಲ್ ಟೆನಿಸ್ ಆಟಗಾರರ ಪೈಕಿ ಒಬ್ಬರಾಗಿರುವ ಸೌಮ್ಯಜಿತ್ ಘೋಷ್ ಅಲ್ಲದೆ, ದೇವೇಶ್ ಕರಿಯಾ, ಅಂಕಿತಾ ದಾಸ್ ಹಾಗೂ ಮೌಮಾ ದಾಸ್ ಅವರಿದ್ದ ತಂಡ ಕೋಚ್ ವಿಜಯಸಾರಥಿ ಶೇಷಾದ್ರಿ ಅವರೊಂದಿಗೆ ಚೆನ್ನೈನಿಂದ ವಿದೇಶಕ್ಕೆ ತೆರಳಿತು. ಜೂನ್ 28ರವರೆಗೆ ನಡೆಯಲಿರುವ ಸ್ಪರ್ಧಾವಳಿಯಲ್ಲಿ ಏಷ್ಯಾ ಹಾಗೂ ಕೆಲ ಯೂರೋಪ್ ಆಟಗಾರರು ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಈ ಪಂದ್ಯಾವಳಿಯ ನಂತರ ಜುಲೈ 1ರಿಂದ 5ರವರೆಗೆ ಇಂಚಾನ್‍ನಲ್ಲಿ ನಡೆಯಲಿರುವ ವಲ್ರ್ಡ್ ಟೂರ್ ಕೊರಿಯಾ ಓಪನ್‍ನಲ್ಲಿ ಇದೇ ಭಾರತ ತಂಡ ಸ್ಪರ್ಧಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


