ಕ್ರೀಡೆ

ನಾಯಕ ಧೋನಿ ಸಮರ್ಥಿಸಿಕೊಂಡ ಅಶ್ವಿನ್

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಭುಗಿಲೇಳುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸರಣಿ ಸೋಲಿನ...

ನಾಯಕ ಧೋನಿ ಸಮರ್ಥಿಸಿಕೊಂಡ ಅಶ್ವಿನ್
ಆರ್ ಅಶ್ವಿನ್
Published On :

ಮೀರ್ ಪುರ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಭುಗಿಲೇಳುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸರಣಿ ಸೋಲಿನ ದೋಷವನ್ನು ಧೋನಿ ತಲೆಗೆ ಕಟ್ಟುವುದು ಸರಿಯಲ್ಲ ಎಂದಿದ್ದಾರೆ ಎಂದು ಖಾಸಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಢಾಕಾದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, `ಧೋನಿ, ಭಾರತ ಕ್ರಿಕೆಟ್ ರಂಗದ ದಂತಕಥೆ. ಬಾಂಗ್ಲಾದೇಶದ ಸರಣಿ ಸೋಲು ತಂಡದ ಸಾಂಸ್ಥಿಕ ಪ್ರದರ್ಶನದ ಕೊರತೆಯಿಂದ ಉಂಟಾಗಿದ್ದು. ಇದಕ್ಕೆ ಧೋನಿಯೊಬ್ಬರೇ ಕಾರಣರಲ್ಲ' ಎಂದಿದ್ದಾರೆ. ಅಲ್ಲದೆ ಬಾಂಗ್ಲಾದೇಶ ವಿರುದ್ಧ ಸರಣಿ ಸೋತ ತಂಡಗಳ ಪೈಕಿ ಭಾರತ ಮೊದಲ ತಂಡವೇನು ಅಲ್ಲ ಎಂದು ಅಶ್ವಿನ್ ಹೇಳಿದ್ದಾರೆ. ತಂಡದ ಹಿರಿಯ ಆಟಗಾರ ಸುರೇಶ್ ರೈನಾ ಸಹ ಅಶ್ವಿನ್ ವಾದವನ್ನು ಅನುಮೋದಿಸಿದ್ದಾರೆ. `ಸರಣಿ ಸೋಲಿಗೆ  ಧೋನಿಯವರನ್ನು ದೂರುವುದು ಸಲ್ಲ' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.