ಕ್ರೀಡೆ

ಏಷ್ಯನ್ ಜಿಪಿ ಅಥ್ಲೆಟಿಕ್ಸ್: ರಾಜ್ಯದ ಪೂವಮ್ಮಗೆ ಕಂಚಿನ ಗೌರವ

ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು, ಏಷ್ಯನ್ ಗ್ರ್ಯಾನ್ ಫ್ರೀ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಗೌರವಕ್ಕೆ ಪಾತ್ರರಾಗಿದ್ದಾರೆ.

ಏಷ್ಯನ್ ಜಿಪಿ ಅಥ್ಲೆಟಿಕ್ಸ್: ರಾಜ್ಯದ ಪೂವಮ್ಮಗೆ ಕಂಚಿನ ಗೌರವ
ಎಂ.ಆರ್. ಪೂವಮ್ಮ
Published On :

ಬ್ಯಾಂಕಾಂಕ್: ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು, ಏಷ್ಯನ್ ಗ್ರ್ಯಾನ್ ಫ್ರೀ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಹಿಳೆಯರ 400 ಮೀ, ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂವಮ್ಮ, 53.51 ಸೆಕೆಂಡ್‌ಗಳಲ್ಲಿ ಗುರು ಮುಟ್ಟಿ ಕಂಚಿನ ಪದಕ ಪಡೆದಿದ್ದಾರೆ.

ಪೂವಮ್ಮ ಗಳಿಸಿದ ಪದಕವೂ ಸೇರಿದಂತೆ ಸೋಮವಾರ ಆರಂಭಗೊಂಡ ಏನ್ಯನ್ ಗ್ರ್ಯಾನ್ ಫ್ರೀ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಐದು ಕಂಚಿನ ಪದಕ ಲಭ್ಯವಾಗಿವೆ.

800 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉದಯೋನ್ಮುಖ ಓಟಗಾರ ಜಿನ್ಸನ್ ಜಾನ್ಸನ್ ಅವರು, 48.59 ಸೆಕೆಂಡ್‌ಗಳಲ್ಲಿ ಗುರು ಮುಟ್ಟಿ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ.

ಶಾಟ್‌ಪುಟ್‌ನಲ್ಲಿ ಏಷ್ಯಾದ ಚಾಂಪಿಯನ್ ಆಗಿರುವ ಇಂದರ್‌ಜೀತ್ ಸಿಂಗ್ ಅವರೂ 19.83 ಮೀಟರ್‌ಗಳವರೆಗೆ ಗುಂಡನ್ನು ಎಸೆದು ಚಿನ್ನದ ಗೌರವ ಪಡೆದರು.

ಲಾಂಗ್ ಜಂಪ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಂಕಿತ್ ಶ್ರಮಾ ಅವರು, 2.78 ಮೀಟರ್‌ಗಳವರೆಗೆ ಜಿಗಿದು ಬೆಳ್ಳಿ ಪದಕಕ್ಕೆ ಪಾತ್ರರಾದರೆ, 400 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 2014ರ ಏಷ್ಯನ್ ಗೇಮ್ಸ್ ಕಂಚು ವಿಜೇತ ಆರೋಕ್ಯ ರಾಜೀವ್ 46.86 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.