ವಿಶ್ವದ ಅಗ್ರ ಚದುರಂಗ ಆಟಗಾರ ಕಾರ್ಲ್ಸನ್ ಮಣಿಸಿದ ವಿಶ್ವನಾಥ್ ಆನಂದ್
ವಿಶ್ವದ ನಂಬರ್ ಒನ್ ಚದುರಂಗ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಭಾರತದ ನಂಬರ್ ಒನ್ ಆಟಗಾರ ವಿಶ್ವನಾಥನ್ ಆನಂದ್ ಶಾಕ್ ಕೊಟ್ಟಿದ್ದಾರೆ...

ನಾರ್ವೆ: ವಿಶ್ವದ ನಂಬರ್ ಒನ್ ಚದುರಂಗ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಭಾರತದ ನಂಬರ್ ಒನ್ ಆಟಗಾರ ವಿಶ್ವನಾಥನ್ ಆನಂದ್ ಶಾಕ್ ಕೊಟ್ಟಿದ್ದಾರೆ.
ಸ್ಟಾವಂಜೆರ್ ನಗರದಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ 2015 ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ವಿಶ್ವನಾಥ್ ಆನಂದ್ 47 ನಡೆಗಳಲ್ಲಿ ನಾರ್ವೆಯವರೇ ಆದ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಜಯ ಸಾಧಿಸಿದ್ದಾರೆ. ಈ ಗೆಲುವಿನಿಂದ ಆನಂದ್ ಈ ಟೂರ್ನಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.
ಈ ಪಂದ್ಯದಲ್ಲಿ ವಿಶ್ವನಾಥನ್ ಆನಂದ್ ಮೊದಲಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದು ವಿಶೇಷ. ಜೊತೆಗೆ, ವಿನೂತನ ಪ್ರಯೋಗವನ್ನೂ ಮಾಡಿ ಕಾರ್ಲ್ಸನ್'ಗೆ ಅಚ್ಚರಿ ತರಿಸಿದರು.
ವಿಶ್ವದ ನಂಬರ್ ಒನ್ ಚೆಸ್ ಆಟಗಾರನೆಸಿರುವ ಮ್ಯಾಗ್ನಸ್ ಕಾರ್ಲ್ಸನ್ ಈ ಟೂರ್ನಿಯಲ್ಲಿ ಈವರೆಗೂ ಹೀನಾಯ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ನಾಲ್ಕು ಸುತ್ತಿನಲ್ಲಿ ಇದು ಅವರ ಮೂರನೇ ಸೋಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


