ಕ್ರೀಡೆ

ಡಿಕ್ಕಿ ಪ್ರಕರಣ: ಧೋನಿ, ರಹಮಾನ್‌ಗೆ ದಂಡ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಬಾಂಗ್ಲಾದೇಶ ವೇಗದ ಬೌಲರ್‌ ಮುಸ್ತಫಿಜುರ್ ರಹಮಾನ್‌ ವಿರುದ್ಧ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ...

ಡಿಕ್ಕಿ ಪ್ರಕರಣ: ಧೋನಿ, ರಹಮಾನ್‌ಗೆ ದಂಡ
ಮಹೇಂದ್ರ ಸಿಂಗ್ ಧೋನಿ ಹಾಗೂ ಬಾಂಗ್ಲಾ ಆಟಗಾರರು
Published On :

ನವದೆಹಲಿ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಬಾಂಗ್ಲಾದೇಶ ವೇಗದ ಬೌಲರ್‌ ಮುಸ್ತಫಿಜುರ್ ರಹಮಾನ್‌ ವಿರುದ್ಧ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಾಬೀತಾಗಿದ್ದು, ಇಬ್ಬರೂ ಆಟಗಾರರಿಗೆ ದಂಡ ವಿಧಿಸಲಾಗಿದೆ.

ನಿನ್ನೆ ಮೀರ್‌ಪುರ್‌ದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಪಂದ್ಯದ ವೇಳೆ ಮುಸ್ತಫಿಜುರ್ ರಹಮಾನ್‌ಗೆ ಡಿಕ್ಕಿ ಹೊಡೆದಿದ್ದ ಧೋನಿಗೆ ಪಂದ್ಯದ ಸಂಭಾವನೆಯ ಶೇ.75ರಷ್ಟು ಹಾಗೂ ರಹಮಾನ್ ಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಿ ಮ್ಯಾಚ್ ರೆಫರಿ ಆಂಡಿ ಪಾಯಿಕ್ರಾಫ್ಟ್ ಆದೇಶ ಹೊರಡಿಸಿದ್ದಾರೆ.

ಐಸಿಸಿ ನಿಮಯಗಳ ಪ್ರಕಾರ ಈ ಆಟಗಾರರು ಕ್ರೀಡೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಧೋನಿ ಹಾಗೂ ಮುಸ್ತಫಿಜುರ್‌ ರೆಹಮಾನ್‌ ಅವರಿಗೆ ದಂಡ ವಿಧಿಸಲಾಗಿದೆ.

ತಮ್ಮ ವೃತ್ತಿ ಜೀವನದಲ್ಲಿ ಇಂಥದ್ದೊಂದು ಸಂದರ್ಭಕ್ಕೆ ಎಂದೂ ಅವಕಾಶ ನೀಡದ ಧೋನಿ, ಈ ಪ್ರಕರಣದಲ್ಲಿ ಈಗ ಮುಜುಗರಕ್ಕೆ ಒಳಗಾಗಿದ್ದಾರೆ.

25ನೇ ಓವರ್‌ನ ಎರಡನೇ ಎಸೆತ ಎಸೆದಿದ್ದ ಮುಸ್ತಫಿಜುರ್‌, ಫೀಲ್ಡಿಂಗ್ ಮಾಡುವತ್ತ ಸಾಗಿದಾಗ ತಮ್ಮ ಭುಜದಿಂದ ಶಕ್ತಿಶಾಲಿಯಾಗಿ ಧೋನಿ ಡಿಕ್ಕಿ ಹೊಡೆದಿದ್ದರು. ಇದರಿಂದ ಗಾಯಗೊಂಡ ಬೌಲರ್‌ ಚಿಕಿತ್ಸೆಗಾಗಿ ಕೆಲಕಾಲ ಅಂಗಳದಿಂದ ಹೊರಗುಳಿದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.