ಏಕದಿನ ಸರಣಿಗೆ ಟೀಂ ಇಂಡಿಯಾ ಸಜ್ಜು
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರು ಸಿದ್ದತೆ ನಡೆಸಿದ್ದಾರೆ...

ಡಾಕಾ: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರು ಸಿದ್ದತೆ ನಡೆಸಿದ್ದಾರೆ, ಭಾರತ ಏಕದಿನ ತಂಡದಲ್ಲಿನ ಎಂಟು ಆಟಗಾರರು ಸುದೀರ್ಘ ವಿರಾಮದ ನಂತರ ಈಗ ಏಕದಿನ ಸರಣಿಗೆ ಸಜ್ಜಾಗಿದ್ದಾರೆ, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜತೆಗೆ ಸ್ಟುವರ್ಟ್ ಬಿನ್ನಿ, ರವೀಂದ್ರ ಜಡೇಜಾ, ಅಕ್ಷರಾ ಪಟೇಲ್, ಸುರೇಶ್ ರೈನಾ, ಮೋಹಿತ್ ಶರ್ಮಾ, ಧವಳ್ ಕುಲಕರ್ಣಿ ಮತ್ತು ಅಂಬಟಿ ರಾಯುಡು, ಸೋಮವಾರ ಬಾಂಗ್ಲಾಗೆ ಆಗಮಿಸಿದರು. ಮಂಗಳವಾರ ಮೀರ್ ಪುರದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದರು,
ಮಳೆಯಿಂದ ಅಡಚಣೆಗೊಳಗಾದ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಭಾರತ ತಂಡ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಕೆಲ ಆಟಗಾರರು ಏಕದಿನ ತಂಡದಲ್ಲಿ ಮುಂದುವರಿಯಲಿದ್ದು, ಉಳಿದ ಆಟಗಾರರು ತವರಿಗೆ ಮರಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ತಂಡದ ತಂಡದ ಮ್ಯಾನೇಜರ್ ವಿಶ್ವರೂಪ್ ಡೇ, ತವರಿಗೆ ಮರಳಿದ ಆಟಗಾರರಿಗೆ ಬೀಳ್ಕೊಡುಗೆ ನೀಡಲು ನಿರ್ಧರಿಸಲಾಗಿತ್ತು ಎಂದರು,
ಜೂನ್ 18 ರಂದು ಮೊದಲ ಏಕದಿನ ಪಂದ್ಯ ಆರಂಭವಾಗಲಿದ್ದು, ನಂತರ 21 ಹಾಗೂ 24 ರಂದು ಕ್ರಮವಾಗಿ 2ನೇ ಹಾಗೂ ಮೂರನೇ ಪಂದ್ಯಗಳು ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


