ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿ: ಗುವಾಮ್ ವಿರುದ್ಧ ಭಾರತಕ್ಕೆ ಸೋಲು
2018ರ ಫಿಫಾ ಫುಟ್ಬಾಲ್ ವಿಶ್ವಕಪ್ ನ ಅರ್ಹತಾ ಟೂರ್ನಿಯಲ್ಲಿ ಪುಟ್ಟ ರಾಷ್ಟ್ರ ಗುವಾಮ್ ವಿರುದ್ಧ ಭಾರತ 1-2 ಗೋಲುಗಳಿಂದ ಹೀನಾಯ ಸೋಲು ಅನುಭವಿಸಿದೆ...

ನವದೆಹಲಿ: 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ನ ಅರ್ಹತಾ ಟೂರ್ನಿಯಲ್ಲಿ ಪುಟ್ಟ ರಾಷ್ಟ್ರ ಗುವಾಮ್ ವಿರುದ್ಧ ಭಾರತ 1-2 ಗೋಲುಗಳಿಂದ ಹೀನಾಯ ಸೋಲು ಅನುಭವಿಸಿದೆ.
ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 141ನೇ ಸ್ಥಾನದಲ್ಲಿರುವ ಭಾರತ 174ನೇ ಸ್ಥಾನದಲ್ಲಿರುವ ಗುವಾಮ್ ವಿರುದ್ಧ ಸುಲಭವಾಗಿ ಗೆಲುವ ನಿರೀಕ್ಷೆಗಳಿದ್ದವು. ಆತ ಗುವಾಮ್ ವಿರುದ್ಧ ಸೋತಿದ್ದರಿಂದ ಭಾರತ ವಿಶ್ವಕಪ್ ಗೆ ಸುಲಭವಾಗಿ ಅರ್ಹತೆ ಗಿಟ್ಟಿಸುವ ಆಸೆ ಬಹುತೇಕ ಕಮರಿಹೋಗಿದೆ.
ಕಳೆದ ಪಂದ್ಯದಲ್ಲಿ ಓಮನ್ ವಿರುದ್ಧ ಕೆಚ್ಚೆದೆಯ ಪ್ರದರ್ಶನ ನೀಡಿ ವೀರೋಚಿತ ಸೋಲು ಅನುಭವಿಸಿದ್ದ ಭಾರತ ಗುವಾಮ್ ವಿರುದ್ಧ ಮಂಕಾದ ಆಟ ಪ್ರದರ್ಶಿಸಿತು.
ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ ಡಿ ಗುಂಪಿನಲ್ಲಿರುವ ಭಾರತಕ್ಕೀದು ಸತತ 2ನೇ ಸೋಲಾಗಿದೆ. ಆದರೆ ಉತ್ತಮ ಪ್ರದರ್ಶನ ನೀಡುತ್ತಿರುವ ಗುವಾಮ್ ಗೆ ಸತತ 2ನೇ ಗೆಲುವಾಗಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಬಲಿಷ್ಠ ಇರಾನ್ ವಿರುದ್ಧ ಸೆಣಸಲಿದೆ. ಅರ್ಹತಾ ಸುತ್ತಿನ ಮುಂದಿನ ಹಂತ ತಲುಪಬೇಕಾದರೆ ಇರಾನ್ ವಿರುದ್ಧ ಭಾರತ ಗೆಲ್ಲಬೇಕಿರುವುದು ಅನಿವಾರ್ಯ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


