ಬೋಪಣ್ಣ ಜೋಡಿ ಚಾಂಪಿಯನ್
ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ,ರೊಮೇನಿಯಾದ ಫ್ಲೊರಿನ್ ಮರ್ಜಿಯಾ, ಸ್ಟುಟ್ ಗರ್ಟ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ...

ಸ್ಟಟ್ ಗರ್ಟ್: ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ,ರೊಮೇನಿಯಾದ ಫ್ಲೊರಿನ್ ಮರ್ಜಿಯಾ, ಸ್ಟುಟ್ ಗರ್ಟ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್-ಮರ್ಜಿಯಾ ಜೋಡಿ, 4ನೇ ಶ್ರೇಯಾಂಕಿತ ಜೋಡಿಯಾದ ಆಸ್ಟ್ರೇಲಿಯಾ-ಬ್ರೆಜಿಲ್ ನ ಜೋಡಿಯಾದ ಅಲೆಕ್ಸಾಂಡರ್ ಪೆಯಾ ಹಾಗೂ ಬ್ರುನೊ ಸೋರ್ಸ್ ಅವರನ್ನು 5-7,6-2 ಹಾಗೂ 10-7 ಸೆಟ್ ಗಳ ಅಂತರದಲ್ಲಿ ಪ್ರಶಸ್ತಿಗೆ ಭಾಜನವಾಯಿತಲ್ಲದೆ, ಸುಮಾರು 4 ಕೋಟಿ 15 ಲಕ್ಷ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಎರಡು ಜೋಡಿಗಳ ನಡುವಿನ ಮೊದಲ ಸೆಟ್ ನಲ್ಲಿ ಬೋಪಣ್ಣ-ಮರ್ಜಿಯಾ ಜೋಡಿ ಸೋಲು ಕಂಡಿತು. ಆದರೆ, ಎರಡನೇ ಸೆಟ್ ನಲ್ಲಿ ಪ್ರತಿರೋಧ ತೋರಿದ ಭಾರತ-ರೊಮೇನಿಯಾ ಜೋಡಿ , ತೀವ್ರ ಹೋರಾಟ ನೀಡಿತು. ಎದುರಾಳಿಗಳಿಗೆ ಒಂದೇ ಒಂದು ಬ್ರೇಕ್ ಪಾಯಿಂಟ್ ನ ಅವಕಾಶವನ್ನೂ ನೀಡದೆ ಆಡಿದ ಈ ಇಬ್ಬರು, ತಮಗೆ ಸಿಕ್ಕಿದ ಮೂರು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ಎರಡನ್ನು ಅಂಕಗಳನ್ನಾಗಿ ಪರಿವರ್ತಿಸಿ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


