ಭಾರತಕ್ಕೆ ಎರಡು ಚಿನ್ನ
ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯನ್ ಕೆಡೆಟ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟುಗಳ ಜೈತ್ರ ಯಾತ್ರೆ ಮುಂದುವರೆದಿದೆ.

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯನ್ ಕೆಡೆಟ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟುಗಳ ಜೈತ್ರ ಯಾತ್ರೆ ಮುಂದುವರೆದಿದೆ. ಪಂದ್ಯಾವಳಿಯ ಉಪಾಂತ್ಯದ ದಿನ ಭಾರತದ ಕುಸ್ತಿಪಟುಗಳಾದ ಸೂರಜ್ ಕುಮಾರ್ ಹಾಗೂ ನವೀನ್ ಅವರು ಚಿನ್ನ ಗೆದ್ದಿದ್ದಾರೆ.
ಶನಿವಾರ ಬಂದ ಎರಡು ಚಿನ್ನದ ಪದಕಗಳ ಜೊತೆಗೆ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕವೂ ಸೇರಿದಂತೆ ಭಾರತಕ್ಕೆ ಐದು ಪದಕಗಳು ಲಭಿಸಿವೆ. ಮೊದಲು ನಡೆದ ಪುರಷರ 54 ಕೆ.ಜಿ ಫ್ರೀ ಸ್ಟೈಲ್ ವಿಭಾಗದ ಅಂತಿಮ ಸುತ್ತಿನ ಪಂದ್ಯದಲ್ಲಿ ನವೀನ್ ಅವರು, ಉಜ್ಬೇಕಿಸ್ತಾನದ ರಾಖ್ ಮೊನೋವ್ ಅಬ್ಬಾಸ್ ಅವರನ್ನು 5 -೦ ಅಂಕಗಳ ಅಂತರದಲ್ಲಿ ಸೋಲಿಸಿದರು. ಇದಾದ ಬಳಿಕ ನಡೆದ 63 ಕೆ.ಜಿ ವಿಭಾಗದ ಪಂದ್ಯದಲ್ಲಿ ರಾಜ್ ಕುಮಾರ್ ಅವರು ತಜಕಿಸ್ತಾನದ ಅಬುಬಾಕ್ರಿ ಜಮ್ಶೆಡ್ ಅವರನ್ನು ೧೨-2 ಅಂಕಗಳಿಂದ ಮಣಿಸಿ ಚಿನ್ನದ ಗೌರವಕ್ಕೆ ಪಾತ್ರರಾದರು.
ಇನ್ನು ಮಹಿಳೆಯರ ವಿಭಾದಲ್ಲಿ ಎರಡು ಬೆಳ್ಳಿ ಪದಕ ಭಾರತಕ್ಕೆ ಲಭಿಸಿದವು. 52 ಕೆ.ಜಿ ವಿಭಾಗದಲ್ಲಿ ಎರಡು ಬೆಳ್ಳಿ ಪದಕ ಭಾರತಕ್ಕೆ ಲಭಿಸಿದೆ. 52 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರೀನಾ, ಜಪಾನ್ ನ ಒಕುನೋ ಹರುನಾ ವಿರುದ್ಧ 0 -7 ಅಂಕಗಳ ಅಂತರದಲ್ಲಿ ಮಣಿದರೆ, 60 ಕೆಜಿ ವಿಭಾಗದ ಫೈನಲ್ ನಲ್ಲಿ ನಿಶಾ ಅವರು ಉಜ್ಬೇಕಿಸ್ತಾನದ ಎಸೆನ್ ಬೇಯಾ ನಾಬಿರಾ ವಿರುದ್ಧ 0 - 4 ಅಂಕಗಳ ಅಂತರದಲ್ಲಿ ಪರಾಭವಗೊಂಡರು. ಏತನ್ಮಧ್ಯೆ 76 ಕೆ.ಜಿ ಗ್ರೆಕೋ- ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಸಾಜನ್, ಭಾರತಕ್ಕೆ ಕಂಚಿನ ಪದಕ ತಂದರು. ಶನಿವಾರ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾರತಕ್ಕೆ ಕೆಲವು ಪದಕಗಳು ಒಲಿದವಾದರೂ ಕೊಂಚ ನಿರಾಸೆಯೂ ಆವರಿಸಿತ್ತು. ಪುರುಷರ 58 ಕೆಜಿ ಫ್ರೀ ಸ್ಟೈಲ್ ಮಹಿಳೆಯರ 56 ಕೆಜಿ ಹಾಗೂ 69 ಕೆಜಿ ಗ್ರೆಕೊ- ರೋಮನ್ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಬರಿಗೈಯ್ಯಲ್ಲಿ ಹಿಂದಿರುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


