ತವರು ಬಿಡಲು ಮೇರಿ ಚಿಂತನೆ?
ತಮ್ಮ ತವರು ರಾಜ್ಯವಾದ ಮಣಿಪುರದಲ್ಲಿ ಉಗ್ರಗಾಮಿಗಳ ಹಿಂಸಾಚಾರ ಮೇರೆ ಮೀರಿದರೆ ತಮ್ಮ ಕುಟುಂಬವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವ

ಬೆಂಗಳೂರು: ತಮ್ಮ ತವರು ರಾಜ್ಯವಾದ ಮಣಿಪುರದಲ್ಲಿ ಉಗ್ರಗಾಮಿಗಳ ಹಿಂಸಾಚಾರ ಮೇರೆ ಮೀರಿದರೆ ತಮ್ಮ ಕುಟುಂಬವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಂ ಹೇಳಿದ್ದಾರೆಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ತಮ್ಮ ರಾಜ್ಯದಲ್ಲಿನ ಸೇನಾ ಶಿಬಿರದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ 18 ಭಾರತೀಯ ಸೈನಿಕರನ್ನು ಕೊಂದಿದ್ದರು.ಇದು ಭಾರಿ ಆಂತಕವನ್ನು ಸೃಷ್ಟಿಸಿತ್ತು. ಈ ಘಟನೆ ಮೇರಿ ಕೋಮ್ ಅವರನ್ನು ನಡುಗಿಸಿದೆ. ಒಳನುಸುಳುವಿಕೆಯ ಪಿಡುಗಿನಿಂದ ತತ್ತರಿಸಿರುವ ಈಶಾನ್ಯ ರಾಜ್ಯದಲ್ಲಿ ಅಸ್ಥಿರತೆಯನ್ನು ಮೂಡಿಸಿದ್ದು, ತಮ್ಮ ಪತಿ, ಮೂವರು ಮಕ್ಕಳ ರಕ್ಷಣೆಗಾಗಿ ಆ ರಾಜ್ಯದಿಂದ ಸ್ಥಳಾಂತರಗೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ತಾವು ಮನೆಯಲ್ಲಿದ್ದಾಗ ಎದುರಿಸುವ ಭೀತಿಯ ಕ್ಷಣಗಳನ್ನು ಮನಬಿಚ್ಚಿ ಹೇಳಿಕೊಂಡಿರುವ ಅವರು, ನನ್ನ ಕುಟುಂಬದ ಜೊತೆಗೆ ಕಾಲ ಕಳೆಯುವ ವೇಳೆಯಲ್ಲಿ ಯಾವುದಾದರೂ ವಿಧ್ವಂಸಕ ಕೃತ್ಯಗಳ ಸುದ್ದಿ ಕಿವಿಗೆ ಬಿದ್ದರೆ ನಾನು ಮಾನಸಿಕವಾಗಿ ಆತಂಕಕ್ಕೊಳಗಾಗುತ್ತೇನೆ. ಅಲ್ಲಿಯ ಜನರೂ ಇದರಿಂದ ಬೇಸತ್ತಿದ್ದಾರೆ. ದಾಳಿಗಳು, ಕೊಲೆಗಳು, ಬಾಂಬ್ ಸ್ಪೋಟಗಳಂಥ ಕೃತ್ಯಗಳನ್ನು ಯಾರೂ ಸಹಿಸುವುದಿಲ್ಲ. ಹಾಗೆಯೇ ಮಣಿಪುರದ ಜನರೂ ಸಹ. ನಾನು ಚಿಕ್ಕವಳಿದ್ದಾಗಿನಿಂದ ಇಂಥ ಅಪಾಯಕಾರಿ ಪ್ರಾಂತ್ಯದಲ್ಲಿ ಜೀವಿಸುವುದು ಹೇಗೆಂಬುದನ್ನು ಕಲಿತಿದ್ದೇನೆ. ಆದರೂ ಒಮ್ಮೊಮ್ಮೆ ನನಗೆ ಆತಂಕವಾಗುತ್ತದೆ. ನನ್ನ ಕುಟುಂಬದ ಸುರಕ್ಷತೆಗಾಗಿ ಅವಶ್ಯಕತೆ ಕಂಡು ಬಂದಲ್ಲಿ ಆ ರಾಜ್ಯವನ್ನೇ ತೊರೆದು ಬೇರೆಡೆ ವಾಸ್ತವ್ಯ ಹೂಡುತ್ತೇನೆ, ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


