ಕ್ರಿಕೆಟ್ ಗೆ ಮ್ಯಾಟ್ ಪ್ರಯರ್ ವಿದಾಯ
ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.....

ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು 33ನೇ ವಯಸ್ಸಿನಲ್ಲಿಯೇ ವಿದಾಯ ಹೇಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಈ ದಿನ ನನ್ನ ಪಾಲಿಗೆ ನೋವಿನ ದಿನ. ಹೆಚ್ಚು ಪ್ರೀತಿಸುವ ಆಟದಿಂದ ದೂರ ಸರಿಯಬೇಕಾಗಿದೆ ಎಂದು ಪ್ರಯರ್ ಹೇಳಿದ್ದಾಗಿ ಇಸಿಬಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಇಂಗ್ಲೆಂಡ್ ಪರ 79 ಟೆಸ್ಟ್ ಆಡಿರುವ ಅವರು 40.18ರ ಸರಾಸರಿಯಲ್ಲಿ 7 ಶತಕ ಮತ್ತು 28 ಅರ್ಧಶತಕ ಒಳಗೊಂಡ 4099 ರನ್ ಗಳಿಸಿದ್ದಾರೆ. ಅಜೇಯ ವಯಕ್ತಿಕ ಗರಿಷ್ಠ ಮೊತ್ತವಾಗಿದೆ. ವಿಕೆಟ್ ಹಿಂದೆ 243 ಕ್ಯಾಚ್ ಪಡೆದು ಸ್ಟಂಪಿಂಗ್ ಮಾಡಿದ್ದಾರೆ.ಅಲ್ಲದೇ 68 ಏಕದಿನ ಪಂದ್ಯಗಳನ್ನಾಡಿ 40.18ರ ಸರಾಸರಿಯಲ್ಲಿ 1282 ರನ್ ಗಳಿಸಿದ್ದಾರೆ. ಇದರಲ್ಲಿ 3 ಕ್ಯಾಚ್ ಪಡೆದು 8 ಸ್ಟಂಪಿಂಗ್ ಮಾಡಿದ್ದಾರೆ. 10 ಟಿ-20 ಪಂದ್ಯಗಳಿಂದ 21.16 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


