ಮಾಜಿ ಕ್ರಿಕೆಟರ್ ಹೇಮಂತ್ ಕಾನಿಟ್ಕರ್ ನಿಧನ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಹೇಮಂತ್ ಕಾನಿಟ್ಕರ್ (72) ಮಂಗಳವಾರ ರಾತ್ರಿ ಪುಣೆಯಲ್ಲಿನ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ.

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಹೇಮಂತ್ ಕಾನಿಟ್ಕರ್ (72) ಮಂಗಳವಾರ ರಾತ್ರಿ ಪುಣೆಯಲ್ಲಿನ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ 1942 ರ ಡಿಸೆಂಬರ್ 8 ರಂದು ಜನಿಸಿದ್ದ ಅವರು ಭಾರತದ ಪರ ಎಂರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕ್ಲೈವ್ ಲಾಯ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ವಿರದ್ಧ ಬೆಂಗಳೂರಿನಲ್ಲಿ 1974ರ ನವೆಂಬರ್ 22 ರಿಂದ 27ರ ವರೆಗೆ ನಡೆದಿದ್ದ ಪಂದ್ಯದ ಮೂಲಕ ಅವರು ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ್ದ ಅವರು 65 ರನ್ ಗಳಿಸಿ ವೃತ್ತಿ ಜೀವನ ಆರಂಭಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ 18 ರನ್ ಗಳಿಸಿದ್ದರು. ಆದರೆ ಹೆಚ್ಚು ಸಮಯ ಭಾರತದ ಪರ ಆಡದ ಅವರ ಪಾಲಿಗೆ 1974 ರಲ್ಲೇ ದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವೇ ಕಡೆಯ ಪಂದ್ಯವಾಯಿತು. ಇಲ್ಲಿ ಅವರು ಎರಡೂ ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 8 ಮತ್ತು 20 ರನ್ ಗಳಿಸಿದ್ದರು, ಒಟ್ಟು 87 ಪ್ರಥಮ ದರ್ಜೆ ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡ ಪ್ರತಿನಿಧಿಸಿದ್ದ ಅವರು 42.78ರ ಸರಾಸರಿಯಲ್ಲಿ 13 ಶತಕ ಮತ್ತು 23 ಅರ್ಧ ಶತಕ ಒಳಗೊಂಡಂತೆ ಒಟ್ಟು 5006 ರನ್ ಗಳಿಸಿದ್ದರು. ಅಲ್ಲದೇ ವಿಕೆಟ್ ಹಿಂದೆ 70 ಕ್ಯಾಚ್ ಹಾಗೂ 20 ಸ್ಟಂಪಿಂಗ್ ಮಾಡಿದ್ದರು. ರಣಜಿ ಟ್ರೋಫಿಯಲ್ಲಿ ಸಹ 43.75ರ ಸರಾಸರಿಯಲ್ಲಿ 3, 632 ರನ್ ಗಳಿಸಿದ್ದಾರೆ. 250 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿ. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


