ಮಾಳವಿಕಾ ದಾಖಲೆ
ಕರ್ನಾಟಕದ ಭರವಸೆಯ ಈಜುಗಾರ್ತಿ ಮಾಳವಿಕಾ.ವಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ರಾಜ್ಯ ಸಬ್ ಜ್ಯೂನಿಯರ್.....

ಬೆಂಗಳೂರು: ಕರ್ನಾಟಕದ ಭರವಸೆಯ ಈಜುಗಾರ್ತಿ ಮಾಳವಿಕಾ.ವಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ರಾಜ್ಯ ಸಬ್ ಜ್ಯೂನಿಯರ್ ಮತ್ತು ಜೂನಿಯರ್ ಈಜು ಚಾಂಪಿನ್ ಶಿಪ್ ನಲ್ಲಿ ರಾಜ್ಯ ದಾಖಲೆ ಬರೆದಿದ್ದಾರೆ.
ಬಸವನಗುಡಿ ಈಜು ಕೇಂದ್ರದಲ್ಲಿ ಮಂಗಳವಾರ ನಡೆದ ಮಹಿಳೆಯರ 800ಮೀ, ಫ್ರೀಸ್ಟೈಲ್ ವಿಭಾಗದಲ್ಲಿ ಮಾಳವಿಕಾ 9.27.60 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ 2012 ರಲ್ಲಿ ಕೃಷ್ಣ ಕೊಲ್ಲಾಳಿ ಅವರ 9.44.25 ದಾಖಲೆ ಮುರಿದಿದ್ದಾರೆ.
ಮಹಿಳೆಯರ 50 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕೆ.ಹರಿಶ್ರೀ ರೈ 32.46 ಸೆಕಂಡ್ ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ 2001 ರಲ್ಲಿ ರೇಷ್ಮಾ ಮಿಲ್ಲೆಟ್ ನಿರ್ಮಿಸಿದ್ದ ರಾಜ್ಯ ಮಟ್ಟದ ದಾಖಲೆ ಅಳಿಸಿ ಹಾಕಿದ್ದಾರೆ.
ಬಾಲಕರ 200 ಮೀಟರ್ ಮಿಡ್ಲ್ ವಿಭಾಗದಲ್ಲಿ ಶೋಹನ್ ಗಂಗೂಲಿ 2.44.19 ನಿಮಿಷದಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಭರತ್ ಕುಮಾರ್ ವಿ 2000 ದಲ್ಲಿ ನಿರ್ಮಿಸಿದ್ದ ದಾಖಲೆ ಹಿಂದಿಕ್ಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


