ಟೀಂ ಇಂಡಿಯಾಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಮಧ್ಯಂತರ ಕೋಚ್
ಟೀಂ ಇಂಡಿಯಾ ಮಾಜಿ ಕೋಚ್ ಡಂಕನ್ ಫ್ಲೆಚರ್ ನಂತರ ಭಾರತ ಕೋಚ್ ಯಾಗಬೇಕೆಂದು ಬಿಸಿಸಿಐ ಇನ್ನು ಸ್ಪಷ್ಟ ನಿಲುವು ಪಡೆದಿಲ್ಲ...

ನವದೆಹಲಿ: ಟೀಂ ಇಂಡಿಯಾ ಮಾಜಿ ಕೋಚ್ ಡಂಕನ್ ಫ್ಲೆಚರ್ ನಂತರ ಭಾರತ ಕೋಚ್ ಯಾರಾಗಬೇಕೆಂದು ಬಿಸಿಸಿಐ ಇನ್ನು ಸ್ಪಷ್ಟ ನಿಲುವು ಪಡೆದಿಲ್ಲ. ಈ ಮಧ್ಯೆ ಜೂನ್ 10 ರಿಂದ ಬಾಂಗ್ಲಾದೇಶ ವಿರುದ್ಧದ ಟೂರ್ನಿಗೆ ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ಮಧ್ಯಂತರ ಕೋಚ್ ಆಗಿ ನೇಮಿಕ ಮಾಡಿದೆ.
ಆಸ್ಟ್ರೇಲಿಯಾ ಮತ್ತು ವಿಶ್ವಕಪ್ ಪಂದ್ಯಾವಳಿಗಳಿಗೆ ಟೀಂ ಇಂಡಿಯಾ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರನ್ನು ಬಿಸಿಸಿಐ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯ ಅವರು ಮಧ್ಯಂತರ ಕೋಚ್ ಆಗಿ ಆಯ್ಕೆ ಮಾಡಿದ್ದು, ಬಾಂಗ್ಲಾದೇಶ ಪ್ರವಾಸದ ನಂತರ ಪೂರ್ಣಾವಧಿ ಕೋಚ್ ನೇಮಕ ಮಾಡಲಾಗುತ್ತದೆ. ಕ್ರಿಕೆಟ್ ಸಂಬಂಧಿಸಿದ ಎಲ್ಲಾ ಸಲಹೆಗಳನ್ನು ಹೊಸದಾಗಿ ನೇಮಿಸಲಾದ ಸಮಿತಿಯಿಂದ ಪಡೆಯಲಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
ರವಿ ಶಾಸ್ತ್ರಿ ಅವರು 80 ಟೆಸ್ಟ್ ಹಾಗೂ 150 ಏಕದಿನ ಕ್ರಿಕೆಟ್ ಆಡಿದ್ದು, 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಕ್ರಿಕೆಟ್ ಜತೆ ಸದಾ ನಂಟು ಹೊಂದಿರುವ ಶಾಸ್ತ್ರಿ ಅವರು ಐಸಿಸಿ ವಿಶ್ವಕಪ್ ಕ್ರಿಕೆಟ್ 2015 ಸಂದರ್ಭದಲ್ಲಿ ಟೀಂ ಇಂಡಿಯಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಪಂದ್ಯವನ್ನಾಡಳಿದೆ.
ಟೀಂ ಇಂಡಿಯಾ ಬಾಂಗ್ಲಾ ಪ್ರವಾಸದ ವೇಳಾಪಟ್ಟಿ:
ಜೂನ್ 10-14: ಮೊದಲ ಟೆಸ್ಟ್.
ಜೂನ್ 18: 1ನೇ ಏಕದಿನ ಪಂದ್ಯ
ಜೂನ್ 21: 2ನೇ ಏಕದಿನ ಪಂದ್ಯ
ಜೂನ್ 24: 3ನೇ ಏಕದಿನ ಪಂದ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


