ಕ್ರೀಡೆ

ಅಂತಾರಾಷ್ಟ್ರೀಯ ಕುಸ್ತಿ: ಭಾರತಕ್ಕೆ 8 ಚಿನ್ನದ ಪದಕ

ಭಾರತದ ಕುಸ್ತಿಪಟುಗಳು ಇಟಲಿಯ ಸಸ್ಸಾರಿ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 8 ಚಿನ್ನದ ಪದಕಗಳು...

ಅಂತಾರಾಷ್ಟ್ರೀಯ ಕುಸ್ತಿ: ಭಾರತಕ್ಕೆ 8 ಚಿನ್ನದ ಪದಕ
ಕುಸ್ತಿ
Published On :

ನವದೆಹಲಿ: ಭಾರತದ ಕುಸ್ತಿಪಟುಗಳು ಇಟಲಿಯ ಸಸ್ಸಾರಿ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 8 ಚಿನ್ನದ ಪದಕಗಳು ಒಳಗೊಂಡಂತೆ ಒಟ್ಟು 9 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.

ಭರವಸೆಯ ಕುಸ್ತಿಪಟುಗಳಾದ ಸೋನು (61ಕೆ.ಜಿ.), ಸೋಮವೀರ್ (86ಕೆ.ಜಿ.), ಮೌಸಮ್ ಖತ್ರಿ (97 ಕೆ.ಜಿ) ಮತ್ತು ಹಿತೇಂದರ್ (125 ಕೆ.ಜಿ.) ಅವರು ತಮ್ಮ ಪ್ರತ್ಯೇಕ ತೂಕದ
ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದರು.

ಅಮಿತ್ ಕುಮಾರ್ (57ಕೆ.ಜಿ), ಒಲಿಂಪಿಕ್ಸ್ ಪದಕದ ಖ್ಯಾತಿಯ ಯೋಗೇಶ್ವರ್ ದತ್  (65ಕೆ.ಜಿ.), ಪ್ರವೀಣ್ ರಾಣಾ (70ಕೆ.ಜಿ.), ನರಸಿಂಗ್ ಯಾದವ್ (74ಕೆ.ಜಿ.) ವಿವಿಧ ವಿಭಾಗಗಳಲ್ಲಿ ಸ್ವರ್ಣ ಪದಕ ಸಂಪಾದಿಸಿದ್ದರು. ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿಯೇ ಭಾರತಕ್ಕೆ ಚಿನ್ನ ಲಭಿಸಿದವು. ಈ ಮಧ್ಯೆ ರಜನೀಶ್ 65 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ  ಕಂಚಿನ ಪದಕಕ್ಕೆ ಸಮಾಧಾನಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.