ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವನಿತೆಯರ ತಂಡ
ವಿಶ್ವ ಆರ್ಚರಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿರುವ ಭಾರತೀಯ ಬಿಲ್ಲುಗಾರ್ತಿಯರ ರಿಕರ್ವ್ ತಂಡ, ಮುಂದಿನ ವರ್ಷ ನಡೆಯಲಿರುವ ರಿಯೊ...

ಕೋಪನ್‍ಹೇಗನ್ (ಡೆನ್ಮಾರ್ಕ್): ವಿಶ್ವ ಆರ್ಚರಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿರುವ ಭಾರತೀಯ ಬಿಲ್ಲುಗಾರ್ತಿಯರ ರಿಕರ್ವ್ ತಂಡ, ಮುಂದಿನ ವರ್ಷ ನಡೆಯಲಿರುವ ರಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ಗಳಿಸಿಕೊಂಡಿದೆ.
ಮಂಗಳವಾರ ನಡೆದ 16ರ ಘಟ್ಟದ ಸುತ್ತಿನಲ್ಲಿ ದೀಪಿಕಾ ಕುಮಾರಿ, ಲಕ್ಷ್ಮಿ ರಾಣಿ ಮಾಂಝಿ ಹಾಗೂ ರಿಮಿಲ್ ಬುರುಲಿ ಅವರುಳ್ಳ ಭಾರತ ತಂಡ, ಜರ್ಮನಿ ವಿರುದ್ಧ ಸ್ಪರ್ಧೆಯಲ್ಲಿ 53 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿ, ಕ್ವಾರ್ಟರ್ ಫೈನಲ್ ಗೆ ಕಾಲಿಟ್ಟಿತು. ಈ ಮೂಲಕ, ಮುಂದಿನ ಒಲಿಂಪಿಕ್ಸ್‌ನಲ್ಲಿ ಆಡುವ ಆರ್ಹತೆಯನ್ನು ಪಡೆದುಕೊಂಡಿತು. ಸ್ಪರ್ಧೆಯ ಆರಂಭದಲ್ಲಿ 1-3 ಅಂಕಗಳ ಅಂತರದಲ್ಲಿ ಹಿನ್ನಡೆ ಹೊಂದಿದ್ದ ಭಾರತ ತಂಡದ ಆಟಗಾರ್ತಿಯರು ತಮ್ಮ ಶಕ್ತಿ ಮೀರಿ ಹೋರಾಟ ನಡೆಸಿದರು.
ಪುರುಷರ ತಂಡಕ್ಕೆ ನಿರಾಸೆ: ಪುರುಷರ ವಿಭಾಗದಲ್ಲಿ, ರಾಹುಲ್ ಬ್ಯಾನರ್ಜಿ, ಮಂಗಲ್ ಸಿಂಗ್ ಚಾಂಪಿಯಾ ಹಾಗೂ ಜಯಂತಾ ತಾಲೂಕ್ದಾರ್ ಅವರುಳ್ಳ ಭಾರತ ತಂಡ, ಟೂರ್ನಿಯ 8ರ ಘಟ್ಟಕ್ಕೆ ಕಾಲಿಡುವಲ್ಲಿ ವಿಫಲವಾಗಿದ್ದು, ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಆಡುವ ಆರ್ಹತೆಯಿಂದ ವಂಚಿತವಾಗಿದೆ. ಮಂಗಳವಾರದ ಸ್ಪರ್ಧೆಯಲ್ಲಿ, ಟೂರ್ನಿಯ 2ನೇ ಶ್ರೇಯಾಂಕಿತ ತಂಡ, ಇಟಲಿಯ ವಿರುದ್ಧ ಸೆಣಸಿದ ಭಾರತೀಯರು, ಸ್ಪರ್ಧೆಯ ಮೊದಲಿನಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದರು.
ಇದರ ಹೊರತಾಗಿ ಯೂ, ಇಟಲಿ ಭರ್ಜರಿ ಪ್ರದರ್ಶನ ನೀಡಿತು. ಆದರೆ, ಪಟ್ಟುಬಿಡದ ಭಾರತೀಯರೂ ಇಟಲಿಗೆ ಸಡ್ಡು ಹೊಡೆದರು. ಇತ್ತಂಡಗಳ ಈ ಸಮಬಲದ ಹೋರಾಟದಿಂದಾಗಿ ಸ್ಪರ್ಧೆ ಟೈ ಬ್ರೇಕರ್ ಗೆ ಬಂದು ನಿಂತಿತು. ನಂತರ, ಮುಂದುವರಿದ ಆಟದಲ್ಲಿ ಇಟಲಿ ತಡೇವೇ 29-26 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿತು. ತಂಡದ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆ ಕಳೆದುಕೊಂಡರೂ, ಮಂಗಲ್ ಸಿಂಗ್ ಚಾಂಪಿಯಾ ಹಾಗೂ ಜಯಂತಾ ತಾಲೂಕ್ದಾರ್ ಅವರಿಗೆ ವೈಯಕ್ತಿಕ ಸ್ಪರ್ಧೆಗಳಲ್ಲಿ ಒಲಿಂಪಿಕ್ಸ್‌ಗೆ ಅವಕಾಶ ಪಡೆಯುವ ಸಾಧ್ಯತೆಗಳಿವೆ. ವೈಯಕ್ತಿಕ ಸುತ್ತಿನ ಸ್ಪರ್ಧೆಗಳ ಅಂತ್ಯದ ವೇಳೆಗೆ, ಈ ಮೂವರೂ ಟಾಪ್ 32ರೊಳಗಿನ ಪಟ್ಟಿಯಲ್ಲಿ ಕಾಣಿಸಿಕೊಂಡರೆ, ಅವರಿಗೆಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಹಸಿರು ನಿಶಾನೆ ಸಿಕ್ಕಂತಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


