ಬಿಸಿಸಿಐ ಪಿತೂರಿಯಿಂದ ಪಾಕ್ ಬೌಲರ್ ಗಳು ಅಮಾನತಾಗುತ್ತಿದ್ದಾರೆ: ಪಿಸಿಬಿ ಮಾಜಿ ಅಧ್ಯಕ್ಷ
ಪಾಕಿಸ್ತಾನದ ಪ್ರಮುಖ ಬೌಲರ್ ಗಳನ್ನು ಅಮಾನತು ಮಾಡುವುದಕ್ಕೆ ಬಿಸಿಸಿಐ ಷಡ್ಯಂತ್ರ ರೂಪಿಸಿದೆ: ಪಿಸಿಬಿ ಮಾಜಿ ಅಧ್ಯಕ್ಷ

ಕರಾಚಿ: ಪಾಕಿಸ್ತಾನದ ಪ್ರಮುಖ ಬೌಲರ್ ಗಳನ್ನು ಅಮಾನತು ಮಾಡುವುದಕ್ಕೆ ಬಿಸಿಸಿಐ ಷಡ್ಯಂತ್ರ ರೂಪಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನ ಮಾಜಿ ಅಧ್ಯಕ್ಷ ಝಾಕ ಅಶ್ರಫ್ ಆರೋಪಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ ನ್ನು ಓಲೈಸುವ ನೀತಿ ಅಳವಡಿಸಿಕೊಂಡಿದೆ. ಆದರೆ ಇದರಿಂದಾಗಿ ಪಿಸಿಬಿಗೆ ಯಾವುದೇ ಉಪಯೋಗವಾಗಿಲ್ಲ ಎಂದು ಝಾಕ ಅಶ್ರಫ್ ಹೇಳಿದ್ದಾರೆ. ಶಂಕಾಸ್ಪದ ಬೌಲಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಮೊಹಮದ್ ಹಫೀಜ್ ವಿರುದ್ಧ ಕೈಗೊಂಡಿರುವ ಕ್ರಮವನ್ನು ರದ್ದುಗೊಳಿಸಲು ಪಿಸಿಬಿ ಐಸಿಸಿಗೆ ಮನವಿ ಮಾಡಬಹುದಾಗಿತ್ತು ಎಂದಿರುವ ಅಶ್ರಫ್, ಮೊಹಮದ್ ಹಫೀಜ್ ವಿರುದ್ಧ ಕೈಗೊಂಡಿರುವ ಕ್ರಮದ ಹಿಂದೆ ಬಿಸಿಸಿಐ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನದ ಪ್ರಮುಖ ಬೌಲರ್ ಗಳನ್ನು ಅಮಾನತು ಮಾಡಿಸಬೇಕೆಂಬ ಉದ್ದೇಶ ಬಿಸಿಸಿಐಗಿದೆ ಎಂದು ಅಶ್ರಫ್ ಹೇಳಿದ್ದಾರೆ.
ವಿಶ್ವಕಪ್ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಮುಖ ಬೌಲರ್ ಗಳಾದ ಹಫೀಜ್ ಹಾಗೂ ಸಯೀದ್ ಅಜ್ಮಲ್ ಅಮಾನತುಗೊಂಡಿದ್ದರಿಂದ ಪಾಕಿಸ್ತಾನಕ್ಕೆ ಹಿನ್ನಡೆಯುಂಟಾಗಿದೆ ಇದಕ್ಕೆ ಬಿಸಿಸಿಐ ಪಿತೂರಿಯೇ ಕಾರಣ. ಶಂಕಾಸ್ಪದ ಬೌಲಿಂಗ್ ಹಿನ್ನೆಲೆಯಲ್ಲಿ ಇಬ್ಬರೂ ಬೌಲರ್ ಗಳನ್ನು ಜೈವಿಕ-ಚಲನಶಾಸ್ತ್ರ ಪರೀಕ್ಷೆಗಾಗಿ ಆಸ್ಟ್ರೇಲಿಯಾ ಹಾಗೂ ಆಫ್ರಿಕಾಗೆ ಕಳಿಸುವ ಬದಲು ಚೆನ್ನೈ ಗೆ ಕಳಿಸಲಾಗಿದ್ದನ್ನು ಅಶ್ರಫ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


