ಹಾಕಿ ಕೋಚ್‍ಗಳಿಗೆ ಸ್ವಾತಂತ್ರ್ಯವಿಲ್ಲ : ಜೋಸ್ ಬ್ರಾಸಾ ಮರು ಆರೋಪ
ಹಾಲೆಂಡ್ ನ ಪಾಲ್ ವ್ಯಾನ್ ಆ್ಯಸ್ ಅವರನ್ನು ಭಾರತದ ರಾಷ್ಟ್ರೀಯ ಹಾಕಿ ತಂಡದ ಕೋಚ್ ಸ್ಥಾನದಿಂದ ಪದಚ್ಯುತಿಗೊಳಿಸಿದ ಪ್ರಕರಣದ ಬಗ್ಗೆ ಭಾರತ ತಂಡದ ಮಾಜಿ ...

ನವದೆಹಲಿ: ಹಾಲೆಂಡ್ ನ ಪಾಲ್ ವ್ಯಾನ್ ಆ್ಯಸ್ ಅವರನ್ನು ಭಾರತದ ರಾಷ್ಟ್ರೀಯ ಹಾಕಿ ತಂಡದ ಕೋಚ್ ಸ್ಥಾನದಿಂದ ಪದಚ್ಯುತಿಗೊಳಿಸಿದ ಪ್ರಕರಣದ ಬಗ್ಗೆ ಭಾರತ ತಂಡದ ಮಾಜಿ ಕೋಚ್, ಸ್ಪೇನ್‍ನ ಜೋಸ್ ಬ್ರಾಸಾ ಪುನರುಚ್ಛರಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪಾಲ್ ವ್ಯಾನ್ ಆ್ಯಸ್‍ಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದ ಬ್ರಾಸಾ, ಭಾನುವಾರ ಹಾಕಿ ಇಂಡಿಯಾದ ಮತ್ತಷ್ಚು ಹುಳುಕುಗಳನ್ನು ತೆಗೆದಿರಿಸಿದ್ದಾರೆ.
ಅಲ್ಲದೆ ಕೋಚ್ ಹುದ್ದೆಗೆ ಆಗಮಿಸಿುವ ವ್ಯಕ್ತಿಗಳನ್ನು ಸೂತ್ರದ ಗೊಂಬೆಗಳಂತೆ ಹಾಕಿ ಇಂಡಿಯಾ ನಡೆಸಿಕೊಳ್ಳುತ್ತದೆ ಎಂದು ಅವರು ಆರೋಪಿಸಿದ್ದಾರೆ. ಇದು, ಹಾಕಿ ಇಂಡಿಯಾದೊಳಗಿನ ಇರುವ ಹುಳುಕುಗಳ ಬಗ್ಗೆ ಮತ್ತೆ ಬೆಳಕು ಚೆಲ್ಲಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿರುವ ಅವರು, ``ಕೇವಲ ಪಾಲ್ ವ್ಯಾನ್ ಆ್ಯಸ್ ಅಲ್ಲ. ಜಗತ್ತಿನ ಯಾವುದೇ ಶ್ರೇಷ್ಠ ಕೋಚ್ ಬಂದರೂ ಅವರು ಸರಿಬರಲಿಲ್ಲ ಎಂದರೆ ಹಾಕಿ ಇಂಡಿಯಾ ಮುಲಾಜಿಲ್ಲದೇ ಅವರನ್ನು ಕಿತ್ತುಹಾಕುತ್ತಾರೆ. ನಾನು ಕೋಚ್ ಆಗಿದ್ದಾಗಲೂ ನನ್ನನ್ನು ಆ ಸ್ಥಾನದಿಂದ ವಜಾಗೊಳಿಸಲಾಗಿತ್ತು. ನನಗಿಂತಲೂ ಮುಂಚೆ ಜಗತ್ತಿನ ಶ್ರೇಷ್ಠ ಕೋಚ್ ಎಂದ ಹಿರಿಮೆಗೆ ಪಾತ್ರರಾಗಿದ್ದ ರಿಕ್ ಚಾರ್ಲ್‍ಸನ್ ಅವರನ್ನೂ ವಜಾಗೊಳಿಸಲಾಗಿತ್ತು'' ಎಂದು ಅವರು ತಿಳಿಸಿದರು.
ಕೋಚ್ ಆಗಿ ನೇಮಕ ಮಾಡುವಾಗ ಅಂಗೈಯ್ಯಲ್ಲೇ ಆಕಾಶ ತೋರಿಸುವ ಹಾಕಿ ಇಂಡಿಯಾ ಹಾಗೂ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ತಂಡಕ್ಕೆ ಆಟಗಾರರನ್ನು ನೇಂಕ ಮಾಡುವಾಗ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಒಮ್ಮೆ ಕೋಚ್ ಆಗಿ ನೀವು ಅಧಿಕಾರ ಸ್ವೀಕರಿಸಿದ ನಂತರ ಅವರ ನಿಜವಾದ ಬಣ್ಣ ಬಯಲಾಗುತ್ತದೆ'' ಎಂದು ಅವರು ಹೇಳಿದರು.
ಮುಕ್ತವಾಗಿ ಕೆಲಸ ಮಾಡಲು ಅನುಕೂಲವಾಗದ ವಾತಾವರಣ ಅಲ್ಲಿರುವುದೇ ಅಲ್ಲಿನ ಪ್ರಮುಖ ಸಮಸ್ಯೆ ಎಂದಿರುವ ಅವರು, ಹಾಕಿ ಇಂಡಿಯ ಹೇಳಿದ್ದನ್ನು ಕೋಲೆಬಸವನ ರೀತಿಯಲ್ಲಿ ತಲೆಯಲ್ಲಾಡಿಸುತ್ತಾ ಪಾಲಿಸುವ ಕೋಚ್ ಗಳು ಮಾತ್ರ ಅಲ್ಲಿ ದೀರ್ಘಕಾಲ ಉಳಿಯುತ್ತಾರೆ. ಆದರೆ, ಕೆಲಸವೇ ದೇವರೆನ್ನುವ ಕೋಚ್‍ಗಳಿಗೆ ಅಲ್ಲಿ ಬೆಲೆಯಿಲ್ಲ. ವಿದೇಶಗಳಿಂದಲೂ ಶ್ರೇಷ್ಠ ಕೋಚ್‍ಗಳನ್ನು ಕರೆ ತಂದರೂ ಅವರಲ್ಲಿನ ಪ್ರಾಮಾಣಿಕತೆಗಾಗಲಿ, ಅವರ ಪ್ರತಿಭೆಗಾಗಲಿ, ಅವರು ಗಳಿಸಿರುವ ವರ್ಚಸ್ಸಿಗಾಗಲೀ ಎಳ್ಳಷ್ಟೂ ಬೆಲೆಯನ್ನು ಹಾಕಿ ಇಂಡಿಯಾ ನೀಡೋದಿಲ್ಲ ಎಂದು ಅವರು ತಿಳಿಸಿದ್ದಾರೆ.
2009ರಿಂದ ಇಲ್ಲಿವಯರೆಗೂ ಒಟ್ಟು ನಾಲ್ವರು ವಿದೇಶಿ ಕೋಚ್‍ಗಳಿಗೆ ಹಾಕಿ ಇಂಡಿಯಾ ಹೊರಹೋಗುವ ಬಾಗಿಲು ತೋರಿದೆ ಎನ್ನುತ್ತಾರೆ ಬ್ರಾಸಾ. ಪಾಲ್ ವ್ಯಾನ್ ಆ್ಯಸ್ ಗೂ ಮುನ್ನ ತಮ್ಮನ್ನೂ ಸೇರಿದಂತೆ ಮೈಕಲ್ ನಾಬ್ಸ್ ಹಾಗೂ ಟೆರ್ರಿ ವಾಲ್ಶ್ ಅವರೂ ವಜಾಗೊಂಡಿದ್ದರು ಎಂದು ಅವರು ತಿಳಿಸಿದರು ಆಯ್ಕೆ ವೇಳೆ ಹುರಿದುಂಬಿಸುತ್ತಾರೆ, ಅದಕ್ಕೆ ಪೂರಕವಾಗಿ ಉತ್ತಮ ಸಂಬಳವನ್ನೂ ನಿಗದಿ ಮಾಡುತ್ತಾರೆ. ಅನಂತರ ಕೋಚ್ ಗಳನ್ನು , ಕೋಚ್‍ಗಳನ್ನು ಕೋತಿಗಳ ಹಾಗೆ ಕುಣಿಸಲು ಯತ್ನಿಸುತ್ತಾರೆ ಎಂದು ಅವರು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


