ಕೊನೆಗೂ ಪಾಲ್ ವಜಾ: ಓಲ್ಟ್ ಮನ್ಸ್ ನೂತನ ಕೋಚ್
ರಾಷ್ಟ್ರೀಯ ಹಾಕಿ ತಂಡದ ತರಬೇತುದಾರನ ಹುದ್ದೆಯಿಂದ ಹಾಲೆಂಡ್ ಮೂಲದ ಪಾಲ್ ವ್ಯಾನ್ ಆ್ಯಸ್ ಅವರು...

ನವದೆಹಲಿ: ರಾಷ್ಟ್ರೀಯ ಹಾಕಿ ತಂಡದ ತರಬೇತುದಾರನ ಹುದ್ದೆಯಿಂದ ಹಾಲೆಂಡ್ ಮೂಲದ ಪಾಲ್ ವ್ಯಾನ್ ಆ್ಯಸ್ ಅವರು ಪದಚ್ಯುತಗೊಂಡಿರುವುದು ಅಧಿಕೃತವಾಗಿದೆ. ಅವರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಿರುವುದಾಗಿ ಹಾಕಿ ಇಂಡಿಯಾ ಅಧಿಕೃತವಾಗಿ ಪ್ರಕಟಿಸಿದೆ.
ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಎದ್ದಿದ್ದ ಬೇಗುದಿಗೆ ಸಂಸ್ಥೆ ತೆರೆ ಎಳೆದಿದೆ. ಪಾಲ್ ಅವರ ಸ್ಥಾನಕ್ಕೆ ತಂಡದ ಗರಿಷ್ಠ ಪ್ರದರ್ಶನ ನಿರ್ದೇಶಕರಾಗಿರುವ ಹಾಲೆಂಡ್ ನವರೇ ಆದ ರೀಲಂಟ್ ಓಲ್ಟ್ಸ್ ಮನ್ಸ್ ಅವರನ್ನು ನೇಮಿಸಲಾಗಿದೆ. ಇನ್ನು ಭಾರತ ತಂಡದ ಸಹಾಯಕ ಕೋಚ್ ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


