ಕ್ರೀಡೆ

ಕೈಕೊಟ್ಟ ಪ್ರೇಮ

ರಷ್ಯಾದ ಟೆನಿಸ್ ರೂಪಸಿ ಹಾಗೂ ಐದು ಬಾರಿಯ ಗ್ರಾಂಡ್‍ಸ್ಲಾಮ್ ಪ್ರಶಸ್ತಿ ವಿಜೇತೆ ಮರಿಯಾ ಶರಪೋವಾ...

ಕೈಕೊಟ್ಟ ಪ್ರೇಮ
ಮರಿಯಾ ಶರಪೋವ ತನ್ನ ಬಾಯ್ ಫ್ರೆಂಡ್ ಗ್ರಿಗೊರ್ ಡಿಮಿಟ್ರೊವ್ ಜೊತೆಗಿದ್ದ ಕ್ಷಣ
Published On :

ಸೋಫಿಯಾ: ರಷ್ಯಾದ ಟೆನಿಸ್ ರೂಪಸಿ ಹಾಗೂ ಐದು ಬಾರಿಯ ಗ್ರಾಂಡ್‍ಸ್ಲಾಮ್ ಪ್ರಶಸ್ತಿ ವಿಜೇತೆ ಮರಿಯಾ ಶರಪೋವಾ ಪ್ರೇಮ ವೈಫಲ್ಯಕ್ಕೆ ಗುರಿಯಾಗಿದ್ದಾರೆ.

ವಿಶ್ವದ ನಂ.1 ಶ್ರೀಮಂತ ಮಹಿಳಾ ಕ್ರೀಡಾ ಅಥ್ಲೀಟ್ ಜತೆಗಿನ ಮೂರು ವರ್ಷಗಳ ಗೆಳೆತನಕ್ಕೆ ಬಲ್ಗೇರಿಯಾ ಆಟಗಾರ ಗ್ರಿಗೊರ್ ಡಿಮಿಟ್ರೊವ್ ಕೊನೆ ಹಾಡಿದ್ದಾರೆ ಎಂದು ಐಬಿಎನ್‍ಲೈವ್ ವೆಬ್ ತಾಣ ವರದಿ ಮಾಡಿದೆ. ``ನಮ್ಮ ಹಾದಿ ಭಿನ್ನವಾಗಿದೆ'' ಎಂದು 24 ವರ್ಷದ ಹಾಗೂ ಎಟಿಪಿ ರ್ಯಾಂಕಿಂಗ್‍ನಲ್ಲಿ ಹದಿನಾರನೇ ಶ್ರೇಯಾಂಕಿತ ಆಟಗಾರ ಡಿಮಿಟ್ರೊವ್ ತಿಳಿಸಿದ್ದಾರೆ. ``ನಾವಿಬ್ಬರೂ ಅನ್ಯೋನ್ಯವಾಗಿದ್ದ ದಿನಗಳು ಸುಂದರವಾಗಿದ್ದವು. ಭವಿಷ್ಯದ ಆಕೆಯ ವೃತ್ತಿ ಬದುಕು ಹಾಗೂ ಜೀವನ ಸಂತಸದಿಂದ ಕೂಡಿರಲೆಂದು ಹಾರೈಸುತ್ತೇನೆ'' ಎಂದು ಡಿಮಿಟ್ರೋವ್ ಹೇಳಿದ್ದಾರೆ.

ಡೆನ್ಮಾರ್ಕ್ ನ ಕೆರೋಲಿನ್ ವೋಜ್ನಿಯಾಕಿ ಕೂಡ ತನ್ನ ಪ್ರಿಯತಮ ಹಾಗೂ ಗಾಲ್ಫ್
ಪಟು ಮೆಕಿಲ್ರಾಯಾ ಅವರಿಂದ ಉಪೇಕ್ಷೆಗೆ ಒಳಗಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.