ಕ್ರೀಡೆ

ಕಳಂಕಿತರ ಭವಿಷ್ಯ ಇಂದು ನಿರ್ಧಾರ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚವ್ಹಾಣ್...

ಕಳಂಕಿತರ ಭವಿಷ್ಯ ಇಂದು ನಿರ್ಧಾರ
ಇಂದು ಪ್ರಕಟಗೊಳ್ಳಲಿರುವ ತೀರ್ಪು
Published On :

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚವ್ಹಾಣ್ ಅವರ ಭವಿಷ್ಯ ಶನಿವಾರ ನಿರ್ಧಾರಗೊಳ್ಳಲಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ನ್ಯಾಯಾಲಯ, ಈ ಬಗ್ಗೆ ಶನಿವಾರ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ.

ಕಳೆದ ತಿಂಗಳು 29 ರಂದು ಪ್ರಕರಣದ ವಿಚಾರಣೆ ಅಂತ್ಯಗೊಳಿಸಿದ್ದ ನ್ಯಾ.ನೀನಾ ಬನ್ಸಾಲ್
ಕೃಷ್ಣ, ತೀರ್ಪಿನ ಪ್ರತಿ ತಯಾರಾಗಿಲ್ಲದ ಕಾರಣ ಕೋರ್ಟ್ ಕಲಾಪವನ್ನು ಜು.25ಕ್ಕೆ ಮುಂದೂಡಿದ್ದರು.

ಅಲ್ಲದೆ, ಅಂದೇ ಪ್ರಕರಣದ ಅಂತಿಮ ತೀರ್ಪನ್ನು ನೀಡುವುದಾಗಿ ಪ್ರಕಟಿಸಿದ್ದರು. 2013ರ  ಐಪಿಎಲ್ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಪ್ರಕರಣವನ್ನು ಮೊದಲ ಬಾರಿಗೆ ದೆಹಲಿ ಪೊಲೀಸರು ಬೇಧಿಸಿದ್ದರು. ಆಗಿನಿಂದ ಈ ಪ್ರಕರಣದ ವಿಚಾರಣೆ ದೆಹಲಿ ನ್ಯಾಯಾಲಯದಲ್ಲಿ
ನಡೆಯುತ್ತಿದೆ. ಈ ಪ್ರಕರಣದಲ್ಲಿ, ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಆತನ ಅನುಯಾಯಿ ಛೋಟಾ ಶಕೀಲ್ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.