ಆಶಸ್ ಟೆಸ್ಟ್: ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು
ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.

ಲಂಡನ್: ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.
ಪಂದ್ಯದ ನಾಲ್ಕನೇ ದಿನದ ಆಟದಲ್ಲೇ ಆಸ್ಟ್ರೇಲಿಯಾ 405 ರನ್ ಗಳ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1 -1 ರ ಸಮಬಲ ಸಾಧಿಸಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಕಾಂಗರೂ ಪಡೆ, ಇನ್ನಿಂಗ್ಸ್ ನ ಎರಡನೇ ದಿನ 4 ವಿಕೆಟ್ ನಷ್ಟಕ್ಕೆ 254 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದಾಗಿ ಪಂದ್ಯದಲ್ಲಿ ಗೆಲ್ಲಲು 509 ರನ್ ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 37 ಓವರ್ ಗಳಲ್ಲಿ 103 ರನ್ ಗಳಿಗೆ ಅಲ ಔಟ್ ಆಯಿತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 108 ರನ್ ಗಳಿಸಿದ್ದ ಆಸ್ಟ್ರೆಲಿಯಾ ಭಾನುವಾರ ತನ್ನ ಇನ್ನಿಂಗ್ಸ್ ಆರಂಭಿಸುತ್ತಾಳೆ ರೋಜರ್ಸ್ ಅವರನ್ನು ಕಳೆದುಕೊಂಡಿತು. 27 ನೇ ಓವರ್ ನ ಕೊನೆಯಲ್ಲಿ ಅವರು ರಿಟೈರ್ ಹರ್ಟ್ ಆಗಿ ಹೊರನಡೆದರು. ಆ ನಂತರವೂ ಆಸ್ಟ್ರೇಲಿಯಾದ ಬ್ಯಾಟ್ಸ್ ಮ್ಯಾನ್ ಗಳು ಆಂಗ್ಲರ ವಿರುದ್ಧ ಹೊಂದಿದ್ದ ಪ್ರಭುತ್ವ ಮತ್ತೆ ಮುಂದುವರೆಸಿದರು. ವಾರ್ನರ್, ಸ್ಟೀವನ್ ಸ್ಮಿತ್, ಮೈಕಲ್ ಕ್ಲಾರ್ಕ್ ಅವರ ಸಹಹಯದಿಂದ ಆಸೀಸ್ 200 ರನ್ ಗಡಿ ದಾಟಿತು. ಅಂತಿಮವಾಗಿ ಆಸ್ಟ್ರೇಲಿಯಾ ತನ್ನ ದ್ವಿತೀಯ ಇನ್ನಿಂಗ್ಸ್ ಮೊತ್ತ 254 ಆದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 509 ರನ್ ಗುರಿ ಮುಟ್ಟುವ ದೊಡ್ಡ ಜವಾಬ್ದಾರಿಯೊಡನೆ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಿಂದಲೂ ಕುಸಿತ ಕಂಡಿತು. ಬ್ಯಾಟ್ಸ್ ಮ್ಯಾನ್ ಗಳು ಬೇಗನೆ ಔಟಾಗಿದ್ದರಿಂದ ಇಂಗ್ಲೆಂಡ್ ಸೋಲಿನತ್ತ ಸಾಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


